ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಲು ಕರೆ

Lingaraj Badiger
Updated On : 18 Feb 2013, 11:04 am

ತರೀಕೆರೆ: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕೆಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಅವರು ಭಾನುವಾರ ಶ್ರೀ ಅಂತರಘಟ್ಟಮ್ಮ ಯುವಕ ಸಂಘ ವತಿಯಿಂದ ಶ್ರೀ ಗುರು ರೇವಣಸಿದ್ದೇಶ್ವರ ಸಮುದಾಯ ಭವನದ ಆವರಣದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ಮರಳು ತುಂಬಿದ ಎತ್ತಿನ ಗಾಡಿ ಸ್ಫರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಹಕಾರ ಅಗತ್ಯ: ಗ್ರಾಮೀಣ ಕ್ರೀಡೆಯನ್ನು ಉತ್ತೇಜಿಸಲು, ರೈತರನ್ನು ಪ್ರೋತ್ಸಾಹಿಸಲು ಸಂಘದ ಯುವಕರು ಉತ್ಸಾಹದಿಂದ ಈ ಗ್ರಾಮೀಣ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇಂತಹ ಗ್ರಾಮೀಣ ಕ್ರೀಡಾಕೂಟ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷ ಟಿ.ಎನ್. ಗೋಪಿನಾಥ್ ಮಾತನಾಡಿ, ರೈತರು ರಾಸುಗಳನ್ನು ಸದೃಢವಾಗಿ  ಆರೋಗ್ಯಯುತವಾಗಿ ಪೋಷಿಸಿ ಬೆಳೆಸಲು ಇಂತಹ ಕ್ರೀಡಾಕೂಟ ಉತ್ತೇಜನ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಪಟ್ಟಣದಲ್ಲಿ ಗ್ರಾಮೀಣ ಕ್ರೀಡೆಗಳಾದ ಕುರಿ ಕಾಳಗ, ಮರಳು ತುಂಬಿದ ಎತ್ತಿನ ಗಾಡಿ ಸ್ಪರ್ಧೆ ನೆಡೆಯುತ್ತಿರುವುದು ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದು ತಿಳಿಸಿದರು.
ಸರ್ಕಾರದ ಪ್ರೋತ್ಸಾಹ: ಪುರಸಭೆ ಮಾಜಿ ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ಉತ್ತಮ ರಾಸುಗಳನ್ನು ಗುರುತಿಸಿ    ಬಹುಮಾನ ನೀಡುವುದರ ಮೂಲಕ ಗ್ರಾಮೀಣ ಕ್ರೀಡೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು  ಎಂದರು.
ಅಂತರಘಟ್ಟಮ್ಮ ಯುವಕ ಸಂಘದ ಗೌರವಾಧ್ಯಕ್ಷ ಶಿವಣ್ಣ, ಅಧ್ಯಕ್ಷ ಜಯ್ಯಣ್ಣ, ಕಾರ್ಯಾಧ್ಯಕ್ಷ ಚೇತನ್, ಉಪಾಧ್ಯಕ್ಷ ದೇವಣ್ಣ, ಟಿ.ಎಂ. ಗಂಗಾಧರ್, ದಿಲೀಪ್, ನವೀನ್, ಗೌರೀಶ್, ಹರೀಶ್, ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement