ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

24ರಂದು ಕೆಸರುಗೆದ್ದೆ ಓಟ

Lingaraj Badiger
Updated On : 19 Feb 2013, 10:55 am

ಶೃಂಗೇರಿ: ತಾಲೂಕಿನ ಅಡ್ಡಗದ್ದೆ ಪಂಚಾಯಿತಿ ಕಾವಡಿ ಕೆಳವಳ್ಳಿಯಲ್ಲಿ ಫೆ.24 ರಂದು ಜಿಲ್ಲಾಮಟ್ಟದ ಕೆಸರುಗದ್ದೆ ಓಟ ಹಾಗೂ ವಾಲಿಬಾಲ್ ಪಂದ್ಯಾವಳಿ, ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ.
ಕರಾಟೆ ಬೆಲ್ಟ್ ಬೆಸ್ಟ್‌ಅವಾರ್ಡ್
ಶೃಂಗೇರಿ: ಪಟ್ಟಣದ ಜೆಸಿಬಿಎಂ ಕಾಲೇಜಿನ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಫೆ.24 ರಂದು ಟೆಕ್ವಾಂಡೋ ಮಾರ್ಷಲ್ ಆರ್ಟ್ ಕರಾಟೆ ಸ್ಕೂಲ್ ಬೆಲ್ಟ್ ಬೆಸ್ಟ್ ಅವಾರ್ಡ್ ಸಮಾರಂಭ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ  ಸಮಾರಂಭವನ್ನು ಸಿಪಿಐ ಸಂಗಮನಾಥ ಹಿರೇಮಠ ಉದ್ಘಾಟಿಸಲಿದ್ದಾರೆ.  ಪಪಂ ಅಧ್ಯಕ್ಷ ಟೆ.ಕೆ. ಪರಾಶರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರಮಟ್ಟದ ಟೇಕ್ವಾಂಡೋ ರೆಫ್ರಿ ಟಿ.ಎಸ್. ಗಿರೀಶ್, ತರಬೇತುದಾರ ರಾಜಶೇಖರ್, ಶಿವಕುಮಾರ್, ವೀರಪ್ಪಗೌಡ ಪಾಲ್ಗೊಳ್ಳಲಿದ್ದಾರೆ.
ವಿಪ್ರ ಸಮ್ಮೇಳನ ಸಮಿತಿ ರಚನೆ
ಶೃಂಗೇರಿ: ಪಟ್ಟಣದಲ್ಲಿ ಮಾರ್ಚ್ 30 ಹಾಗೂ 31ರಂದು ನಡೆಯಲಿರುವ ಶೃಂಗೇರಿ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿ, ಸಂಪನ್ಮೂಲ, ಸಾಂಸ್ಕೃತಿಕ ಸಮಿತಿ, ಸ್ಮರಣ ಸಂಚಿಕೆ , ಆಹಾರ ಸಮಿತಿ, ಸನ್ಮಾನ ಮತ್ತು ಅಭಿನಂದನಾ ಸಮಿತಿಗಳನ್ನು ರಚಿಸಿ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಸಲಾಗುತ್ತಿದೆ.
ಕಾನೂನು ಅರಿವು ನೆರವು ಕಾರ್ಯಕ್ರಮ
ಶೃಂಗೇರಿ: ಪಟ್ಟಣದ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ. ಜಿ.ಸಿದ್ದಲಿಂಗೇ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂನು ಕಾಯ್ದೆಗಳ ಸದ್ಘಳಕೆಯಾಗಬೇಕೆ ಹೊರತು ದುರ್ಬಳಕೆಯಾಗಬಾರದು ಎಂದರು. ಜಿಎಂ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಹೆಗ್ಡೆ, ಚರಣ್, ರಾಜೇಶ್ವರಿ ಇದ್ದರು.
ತಾಲೂಕು ಸಾಹಿತ್ಯ ಸಮ್ಮೇಳನ ಮುಂದಕ್ಕೆ
ನರಸಿಂಹರಾಜಪುರ: ಪಟ್ಟಣ ಪಂಚಾಯ್ತಿ ಚುನಾವಣೆ ಘೋಷಣೆ ಆಗಿರುವುದರಿಂದ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾ.2 ಹಾಗೂ 3ರಂದು ನಡೆಯಬೇಕಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಿದ್ದು ಮಾ.16 ಹಾಗೂ 17ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement