ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂತರಘಟ್ಟಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

Lingaraj Badiger
Updated On : 19 Feb 2013, 10:54 am

ಸಖರಾಯಪಟ್ಟಣ: ಗ್ರಾಮದೇವತೆ ಶ್ರೀ ಅಂತರಘಟ್ಟಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಭಾನುವಾರ ವೈಭವದಿಂದ ಜರುಗಿತು.
ಬೆಳಗಿನ 5 ಗಂಟೆಗೆ ಶ್ರೀ ಕಲ್ಮರುಡಿ ಮಠಕ್ಕೆ ತೆರಳಿದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಭಕ್ತರು ಸಾಮೂಹಿಕವಾಗಿ ಗಂಗಾಪೂಜೆ ಮಾಡಿ ನಂತರ ಗಂಗೆಯನ್ನು ತುಂಬಿದ ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದರು.
ನಂತರ ಧಾರ್ಮಿಕ ವಿಧಿವಿಧಾನಗಳ ನಡುವೆ ದೇವಿಯ ನೂತನ ವಿಗ್ರಹವನ್ನು ಪ್ರತಿಷ್ಟಾಪಿಸಿ ಅದಕ್ಕೆ ಕಳಶಾಭಿಷೇಕ ಮತ್ತು ಕುಂಭಾಭಿಷೇಕ ಮಾಡಲಾಯಿತು.
ಇದೇ ವೇಳೆ ತೊಂಡೆಕೆರೆ ಮಠದ ಶ್ರೀ ಗಂಗಾಧರನಾಥ ಸ್ವಾಮೀಜಿಯವರು ನೂತನವಾಗಿ ನಿರ್ಮಿಸಲಾದ ಗೋಪುರಕ್ಕೆ ಕಳಶ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ನೂತನವಾಗಿ ನಿರ್ಮಿಸಲಾದ ರಥದ ಮನೆಯನ್ನು ಉದ್ಯಮಿ ನಾಗರಾಜ್‌ಅರಸ್ ಉದ್ಘಾಟಿಸಿದರು. ಪ್ರತಿಷ್ಠಾಪನೆ ಅಂಗವಾಗಿ ಶ್ರೀ ಮಹಾಗಣಪತಿ, ಚಂಡಿಕಾ, ನವಗ್ರಹ ಮತ್ತು ಮೃತ್ಯುಂಜಯ ಹೋಮಗಳು ಜರುಗಿದವು.
ನಂತರ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ದೇವಾಲಯಕ್ಕೆ ಇದೇ ವೇಳೆ 1.5 ಲಕ್ಷ  ದೇಣಿಗೆ ನೀಡಿದರು. ಉತ್ಸವದ ನಂತರ ಸಾರ್ವಜನಿಕರ ಅನ್ನಸಂತರ್ಪಣೆ ನಡೆಯಿತು.
ದೇವಾಲಯ ಸಮಿತಿ ಅಧ್ಯಕ್ಷ ಯೋಗೀಂದ್ರಗೌಡ, ಉಪಾಧ್ಯಕ್ಷರಾದ ಲೋಕೇಶ್, ಯೋಗೀಂದ್ರ, ಗೌರವಾಧ್ಯಕ್ಷ ರಾಮೇಗೌಡ, ಖಜಾಂಚಿ ಬಸಪ್ಪಶೆಟ್ಟಿ, ಶ್ರೀಕಾಂತ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement