ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಧರಿಗಾಗಿ ಬ್ರೈಲ್ ಬ್ಯಾಲೆಟ್

Lingaraj Badiger
Updated On : 19 Feb 2013, 10:47 am

ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಬಾರಿ ಅಂಧರು ಯಾರ ಸಹಾಯವೂ ಇಲ್ಲದೆ ಮತ ಚಲಾವಣೆ ಮಾಡಬಹುದು.
ಇದಕ್ಕಾಗಿ ಇದೇ ಪ್ರಥಮ ಬಾರಿಗೆ ರಾಜ್ಯ ಚುನಾವಣಾ ಆಯೋಗ ವಿದ್ಯುದ್ಮಾನ ಮತಯಂತ್ರಗಳಲ್ಲಿ ಅಂಧ ಮತದಾರರಿಗೆ ಅನುಕೂಲ ಕಲ್ಪಿಸಲು ಬ್ರೈಲ್ ಸಂಖ್ಯೆಯನ್ನು ಬ್ಯಾಲೆಟ್ ಯೂನಿಟ್‌ನಲ್ಲಿ ಅಳವಡಿಸಿದೆ.
ಆದ್ದರಿಂದ ಅಂಧರು ತಾವೊಬ್ಬರೇ ಮತದಾನ ಕೇಂದ್ರಕ್ಕೆ ತೆರಳಿ ತಮಗೆ ಸರಿ ಅನಿಸಿದ ವ್ಯಕ್ತಿಗೆ ಮತವನ್ನು ಹಾಕಬಹುದು. ಅಂಧರನ್ನು ಬೇರೆಯವರು ಕರೆದುಕೊಂಡು ಹೋಗಿ ಅವರ ಕೈಯಿಂದ ಮತ ಹಾಕಿಸುವ ಕೆಲಸಕ್ಕೆ ಬ್ರೇಕ್ ಹಾಕಿದಂತಾಗಿದೆ.
ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ವಿದ್ಯುದ್ಮಾನ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ಅಂಧರು ಸ್ವ ಇಚ್ಚೆಯಿಂದ ಮತ ಚಲಾವಣೆ ಮಾಡಲು ಬ್ರೈಲ್ ಸಂಖ್ಯೆಯನ್ನು ಬ್ಯಾಲೆಟ್ ಯೂನಿಟ್‌ನಲ್ಲಿ ಅಳವಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement