ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆನವಟ್ಟಿ ತಾಲೂಕು ಕೇಂದ್ರಕ್ಕೆ ಒತ್ತಾಯ

Lingaraj Badiger
Updated On : 19 Feb 2013, 10:47 am

ಸೊರಬ: ಆನವಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿಸುವಂತೆ ಒತ್ತಾಯಿಸಿ ತಾಲೂಕು ಆನವಟ್ಟಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ವೇದಿಕೆಯ ಉಮೇಶ್ ಉಡುಗಣಿ ಮಾತನಾಡಿ, ಆನವಟ್ಟಿ ಹೋಬಳಿ ಪ್ರದೇಶವಾದರೂ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಹಲವಾರು ಪ್ರಗತಿದಾಯಕ ವಾತಾವರಣವನ್ನು ಹೊಂದಿದೆ ಎಂದ ಅವರು, ಇಲ್ಲಿಗೆ 30 ಕಿಮೀ ದೂರದಲ್ಲಿ ತಾಲೂಕು ಕೇಂದ್ರವಿರುವುದರಿಂದ ಕೃಷಿ ಅಗತ್ಯ ಕಚೇರಿ ಕೆಲಸಗಳು ಸೇರಿದಂತೆ, ಬೇರೆ ಬೇರೆ ಕಾರಣಕ್ಕೆ ಅಲೆಯುವಂತಾಗಿದೆ. ಸಣ್ಣ ಕೆಲಸಕ್ಕೆ ಇಡೀ ದಿನ ವ್ಯಯಿಸುವಂತಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಆನವಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿಸುವುದು ಸೂಕ್ತ. ಇಲ್ಲಿಗೆ ಸಮೀಪವಿರುವ ಜಡೆ ಭಾಗದ 15 ಹಳ್ಳಿ, ಆನವಟ್ಟಿ ಹೋಬಳಿಯ 47 ಹಳ್ಳಿಗಳನ್ನು ಸೇರಿಸಿ ತಾಲೂಕು ಕೇಂದ್ರವನ್ನಾಗಿಸಲು ಅವಕಾಶವಿದೆ. ರೈತರ ತಿರುಗಾಟದ ಬವಣೆಯ ಅಂತರವನ್ನು ಕೂಡ ಕಡಿಮೆ ಮಾಡಿದಂತಾಗುತ್ತದೆ ಎಂದರು.
ಕ್ರಮ ಕೈಗೊಳ್ಳದಿದ್ದಲ್ಲಿ ಆನವಟ್ಟಿ ಬಂದ್ ಆಚರಿಸಿ ಉಗ್ರ ಹೋರಾಟ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಲ್ಲಿನ ನಾಡ ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ವಸಂತ ನಾಯಕ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ದ್ವಾರಳ್ಳಿ ಶಿವಪ್ಪ ವಕೀಲ, ತಲ್ಲೂರು ಗ್ರಾಪಂ ಅಧ್ಯಕ್ಷ ಹುಚ್ಚಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬಸವರಾಜಪ್ಪ ಅಗಸನಹಳ್ಳಿ, ಮಂಜು ಆನವಟ್ಟಿ, ಬಸವಂತಪ್ಪ, ಮಣಿಕಂಠ ಶೆಟ್ಟಿ, ಶ್ರೀನಿವಾಸಾಚಾರ್,   ಲಕ್ಕವಳ್ಳಿ ಮಂಜುನಾಥ್, ಹೊನ್ನಪ್ಪ, ಹುರಳಿ ಚಂದ್ರಪ್ಪ, ಜಯಣ್ಣ, ಚೆನ್ನಪ್ಪ ನೆಲ್ಲಿಕೊಪ್ಪ, ಅರುಣ ಎಣ್ಣೆಕೊಪ್ಪ, ರಮೇಶ್, ಶಂಕ್ರಪ್ಪ, ಮಲ್ಲೇಶಪ್ಪ, ರಾಮಪ್ಪ, ಕೆ.ರಾಘು, ಬಸಪ್ಪ, ಶಶಿಗೌಡ ಹಿರೆ ಇಡಗೋಡು ಹಾಗೂ ಅನೇಕ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement