ಇಂದು ದೇವಸ್ಥಾನ ಪುನರ್ ಪ್ರತಿಷ್ಠಾಪನೆ
ನರಸಿಂಹರಾಜಪುರ: ಅಗ್ರಹಾರದ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ.19ರ ಮಂಗಳವಾರ ಹಾಗೂ 20ರರ ಬುಧವಾರ ನಡೆಯಲಿದೆ.
19ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆಯಲಿದೆ. ರಾತ್ರಿ ರಾಕ್ಷೋಘ್ನಹೋಮ, ವಾಸ್ತು ಪೂಜೆ, ವಾಸ್ತು ಶಾಂತಿ, ಬಲಿದಾನಾದಿ, ಬಿಂಬ ಶುದ್ದಿ, ಸಪ್ತ ಅದಿವಾಸ ಪೂಜೆಗಳು, ಅಷ್ಟಾವಧಾನ ಸೇವೆಗಳು ನಡೆಯಲಿದೆ. ಫೆ.20ರ ಬುಧವಾರ ಬೆಳಿಗ್ಗೆ 8.40ಕ್ಕೆ ಪ್ರತಿಷ್ಠಾಪನೆ, ಅಷ್ಟಬಂಧ ಲೇಪನ ನಡೆಯಲಿದೆ. 9.30 ಗಂಟೆಗೆ ನವ ಕಲಶ ಸ್ಥಾಪನೆ, ಪವಮಾನ ಹೋಮ, ಪೂರ್ಣಾಹುತಿ, ಕಲಶಾಬಿಷೇಕ, ಶಿಖರ ಪ್ರತಿಷ್ಟೆ, ನಾಗಸನ್ನಿಧಿಯಲ್ಲಿ ಪವಮಾನ ಸೂಕ್ತಾಭಿಷೇಕ, ಪ್ರಸನ್ನಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 1 ಗಂಟೆಗೆ ಮಹಾಮಂಗಳಾರತಿ, ಆಶೀರ್ವಚನ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.