ಕಾಂಗ್ರೆಸ್ ಟಿಕೆಟ್‌ಗೆ ಇಂದು ಕೊನೆಯ ದಿನ
ನರಸಿಂಹರಾಜಪುರ: ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧೆ ಮಾಡುವವರು ಫೆ.19ರ ಒಳಗೆ ಪಕ್ಷಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾಧ್ಯಮ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿ 3 ಪುರಸಭೆ, 4 ಪಟ್ಟಣ ಪಂಚಾಯ್ತಿ, 1 ನಗರಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲಾ ತಾಲೂಕಿನಲ್ಲೂ ಪೂರ್ವಭಾವಿ ಸಭೆಗಳನ್ನು ಮುಗಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿಯೊಂದಿಗೆ ಚರ್ಚೆ ನಡೆಸಿ ಅಧಿಕೃತ ಅಭ್ಯರ್ಥಿಗೆ ಬಿ ಫಾರಂ ನೀಡಲಾಗುವುದು. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ಪಟ್ಟಣ ಹಾಗೂ ನಗರಗಳಿಗೆ ಮೂಲಭೂತ ಸೌಕರ್ಯ ಒದಗಿಸದೆ ಇರುವುದು, ಆಡಳಿತ ಪಕ್ಷದ ಭ್ರಷ್ಟಾಚಾರಗಳನ್ನು ಚುನಾವಣೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದರು. ಡಾ.ಕೆ.ಪಿ. ಅಂಶುಮಂತ್, ವಿಶ್ವನಾಥ ಶೆಟ್ಟಿ, ಸತೀಶ್, ಸುಬ್ರಹ್ಮಣ್ಯ, ಆರ್. ಸದಾಶಿವ, ಕೆ.ವಿ. ವಸಂತಕುಮಾರ್, ಮೀನಾಕ್ಷಿ ಕಾಂತರಾಜ್ ಇತರರು ಇದ್ದರು.