ಕಾಂಗ್ರೆಸ್ನಿಂದ ಪಕ್ಷಾಂತರ ನೀತಿ: ಆರೋಪ
ಮೂಡಿಗೆರೆ: ಸ್ಥಳೀಯ ಚುನಾವಣೆ ಎದುರಿಸಲು ಸಮರ್ಥ್ಯವಿಲ್ಲದ ಕಾಂಗ್ರೆಸ್ ಪಕ್ಷವು ಪಕ್ಷಾಂತರ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ಭ್ರಷ್ಟಾಚಾರವನ್ನು ಮತದಾರರು ಕಣ್ಣಾರೆ ನೋಡಿದ್ದಾರೆ ಎಂದು ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದಂತ ಪಟ್ಟಣ ಪಂಚಾಯಿತಿಯ ಮಾಜಿ ಪ್ರಧಾನ, ಅಧ್ಯಕ್ಷ ಹಾಗೂ ಸದಸ್ಯ ಕೆ. ವೆಂಕಟೇಶ್ ಸೇರಿದಂತೆ ಪ.ಪಂ.ಸದಸ್ಯರು ಕಾಂಗ್ರೆಸ್ಗೆ ಹೋಗಿರುವುದರಿಂದ ಜೆಡಿಎಸ್ಗೆ ನಷ್ಟವಿಲ್ಲ ಎಂದರು.
ಪಟ್ಟಣ ಪಂಚಾಯಿತ್ನ 11 ವಾರ್ಡ್ಗಳಿಗೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದು. ಆಕಾಂಕ್ಷಿಗಳು ಫೆ.19 ರ ಸಂಜೆಯೊಳಕ್ಕೆ ಅರ್ಜಿ ಸಲ್ಲಿಸಲು ಕೋರಿದರು.
ಪಟ್ಟಣ ಪಂಚಾಯಿತ್ ಚುನಾವಣೆಯ ನಂತರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಅಂದು ನಡೆಯುವ ಸಮಾವೇಷದಲ್ಲಿ ಕ್ಷೇತ್ರದ ವಿಧಾನ ಸಭಾ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದರು
ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಎಂ.ಎಸ್. ಬಾಲಕೃಷ್ಣ, ಕಣಚೂರ್ ರಾಜೇಂದ್ರ, ಗುತ್ತಿ ಜಗದೀಶ್, ಚಂದ್ರೇಗೌಡ, ಮಂಡಿಮನೆ ಲಕ್ಷ್ಮಣ್, ರಮೇಶ್, ಲೋಹಿತ್, ದೇವರಾಜ್,ಅಬ್ದುಲ್ ರಜಾಕ್, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.