ವಿಧಾನಸಭಾ ಚುನಾವಣೆಗೆ ದಿಕ್ಸೂಚಿ
ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಕೆಜೆಪಿ ಮುಖಂಡ ಧನಂಜಯಕುಮಾರ್ ಹೇಳಿದ್ದಾರೆ.
ಫೆ.16ರಿಂದ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಲಾಗಿದೆ. ಸೋಮವಾರದಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ಪೂರ್ವ ತಯಾರಿ ಸಮಾಲೋಚನಾ ಸಭೆ ನಡೆಸಲಾಗಿದೆ. ಚಿಕ್ಕಮಗಳೂರು ನಗರಸಭೆಯ 35 ವಾರ್ಡ್ಗಳಲ್ಲಿ ಕೆಜೆಪಿ ಗೆಲವು ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗ್ಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಂಜನ್ ಅಜಿತ್ಕುಮಾರ್, ಟಿ.ಡಿ. ಸೋಮೇಶ್, ಎಚ್.ಎಚ್. ದೇವರಾಜ್, ಸಿ.ಎಚ್. ಲೋಕೇಶ್, ಡಿ.ಎಸ್. ಅಶೋಕ್, ಎಎಸ್ಎಸ್ ಆರಾಧ್ಯ, ಕೆ.ಕೆ. ದಿನೇಶ್, ಜಮೀಲ್ ಅಹಮದ್, ತಮ್ಮಯ್ಯ, ಮಹಮದ್ ಹನೀಫ್, ಮಂಜುಳಮ್ಮ, ರುಕ್ಮಿಣಿ, ಶಿವಕುಮಾರ್, ರವಿಕುಮಾರ್, ಪರಮೇಶ್ರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.
ಸೋಲನ್ನು ಒಪ್ಪಿಕೊಂಡಂತೆ: ಕೆಜೆಪಿ ದೃಷ್ಟಿಯಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಚುನಾವಣೆ ನಡೆಯಬಾರದೆಂದು ಒಳ ಪ್ರಯತ್ನ ಮಾಡಿದ್ದವು. ಈ ಚುನಾವಣೆ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಆಸಕ್ತಿ ಇಲ್ಲ. ಇದೊಂದು ರೀತಿಯಲ್ಲಿ ಸೋಲನ್ನು ಒಪ್ಪಿಕೊಂಡಂತೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಎಚ್. ದೇವರಾಜ್, ರಂಜನ್ ಅಜಿತ್ಕುಮಾರ್, ಅಶೋಕ್, ಆರಾಧ್ಯ, ಕಾಮನಕೆರೆ ಶಶಿಧರ್ ಉಪಸ್ಥಿತರಿದ್ದರು.