ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ವಸಹಾಯ ಸಂಘಗಳಿಗೆ ಟ್ರಂಕ್ ವಿತರಣೆ

Lingaraj Badiger
Updated On : 19 Feb 2013, 10:48 am

ತರೀಕೆರೆ: ವಿಕಸನ ಸಂಸ್ಥೆ, ನಬಾರ್ಡ್ ಬೆಂಗಳೂರು ವತಿಯಿಂದ ಸಮೀಪದ ಬೇಗೂರು ಗ್ರಾಮದಲ್ಲಿ ಮಹಿಳಾ  ಸ್ವಸಹಾಯ ಸಂಘಗಳಿಗೆ ಟ್ರಂಕ್ ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಿಸರ್ಗ ಜಲಾನಯನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಲಿಂಗರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚನೆಗೊಳಿಸಿದ ನಂತರ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸ್ವಸಹಾಯ ಸಂಘದ ದಾಖಲಾತಿಗಳನ್ನು ಇಟ್ಟುಕೊಳ್ಳಲು ಟ್ರಂಕ್ ತುಂಬಾ ಅನುಕೂಲವಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳು  ಸಾಮರ್ಥ್ಯ ಬಲವರ್ಧನೆ ಹೊಂದಲು ಅನುಕೂಲ ಎಂದರು.
ಸಾವಯವ ಕೃಷಿಕ ಈಶ್ವರಪ್ಪ, ಗರ್ಜೆ ಗಡೀಹಳ್ಳಿ, ಮುಗುಳಿ, ಅಣ್ಣಾಪುರ, ಗುಡ್ಡದಹಳ್ಳಿಯ ಮಹಿಳಾ ಸಂಘದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಧು ಸ್ವಾಗತಿಸಿ, ವಿಕಸನ ಸಂಸ್ಥೆ ಸಂಯೋಜಕ ಮಾದಪ್ಪ ಕಾರ್ಯಕ್ರಮ ನಿರೂಪಿಸಿದರು. ಕುಮಾರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement