ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಪಂ ಎಲ್ಲಾ ವಾರ್ಡ್‌ಗಳಲ್ಲಿ ಜೆಡಿಎಸ್ ಗೆಲವು: ವಿಶ್ವಾಸ

Lingaraj Badiger
Updated On : 20 Feb 2013, 11:19 am

ಮೂಡಿಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತದಿಂದ ಬೇಸತ್ತಿರುವ ಜನರು ಮುಂಬರುವ ಪಟ್ಟಣ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳಲ್ಲಿ ಜೆಡಿಎಸ್ ಗೆಲವು ಸಾಧಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡುವ ಸೂಚನೆ ನೀಡಲಿದ್ದಾರೆ ಎಂದು ಯುವ ಜನತಾದಳ ರಾಜ್ಯ ಕಾರ್ಯಾಧ್ಯಕ್ಷ ಅಕ್ಬಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ಮೂಡಿಗೆರೆ ಜೆಡಿಎಸ್ ಕಚೇರಿಯಲ್ಲಿ ಕಾಂಗ್ರೆಸ್, ಕೆಜೆಪಿ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜೆಡಿಎಸ್ ಅನ್ನು ತೊರೆದು ಹೋಗಿರುವ ಅನೇಕ ಮುಖಂಡರಿಗೆ ಬೇರೆ ಪಕ್ಷಗಳಲ್ಲಿ  ಯಾವುದೇ ಸ್ಥಾನ ನೀಡದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಮಾಡಲಾಗಿದೆ ಎಂದರು.  
ಕಪಟ ನಾಟಕ: ಜೆಡಿಎಸ್ ಸರ್ಕಾರ ಆಡಳಿತದಲ್ಲಿ ಶಾಂತಿ ಕಾಪಾಡಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಬಾಬಾಬುಡನ್‌ಗಿರಿ ವಿಚಾರವನ್ನು ಹಿಡಿದು ದೇವಸ್ಥಾನಗಳನ್ನು ಉದ್ಧಾರ ಮಾಡುತ್ತೇವೆಂದು ಅಧಿಕಾರ ಹಿಡಿದವರು ಬಳ್ಳಾರಿಯಲ್ಲಿ ನೂರೈವತ್ತಕ್ಕೂ ಅಧಿಕ ದೇವಸ್ಥಾನಗಳನ್ನು ನೆಲಸಮಗೊಳಿಸುವಾಗ ಅದರ ಬಗ್ಗೆ ಸ್ವಲ್ಪವೂ ಕರುಣೆ ಬರಲಿಲ್ಲವೇ? ಶಿಕ್ಷಣ ಸಚಿವರಾದವರು ದೇಶಕ್ಕಾಗಿ ಹೋರಾಟ ಮಾಡಿದ ಟಿಪ್ಪುವಿನ ಇತಿಹಾಸ ತಿಳಿದುಕೊಳ್ಳದೆ ಏನೇನೋ ಹೇಳಿಕೆ ನೀಡುವುದು ಶೋಭೆಯಲ್ಲ. ಕಾಂಗ್ರೆಸ್ ಮತ ಸೆಳೆಯುವುದಕ್ಕಾಗಿ ಜನರ ಮಧ್ಯೆ ವಿಷ ಬೀಜ ಬಿತ್ತಿ ಕೋಮುಗಲಭೆ ಸೃಷ್ಟಿಸುತ್ತಾ ಕಪಟ ನಾಟಕವಾಡುತ್ತಿರುವುದು ಜನರಿಗೆ ತಿಳಿದಿದೆ. ಆದರೆ ಜೆಡಿಎಸ್ ಪಕ್ಷದಲ್ಲಿ ಮಾತ್ರ ಇದಾವುದೂ ನಡೆಯದೆ ಶಾಂತಿ ಮತ್ತು ಸ್ವಚ್ಛ ಆಡಳಿತವನ್ನು ಕಂಡಿರುವ ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ಅಧಿಕಾರ ನೀಡಲಿದ್ದಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.
ರಾಜ್ಯ ಯುವ ಜನತಾದಳದ ಉಪಾಧ್ಯಕ್ಷರಾಗಿ ಅಲ್ತಾಫ್‌ಹುಸೇನ್, ಸಂಘಟನಾ ಕಾರ್ಯದರ್ಶಿಯಾಗಿ ಗೋಣಿಬೀಡು ಅಲ್ತಾಫ್, ಜೆಡಿಎಸ್ ನಗರಘಟಕದ ಅಧ್ಯಕ್ಷರಾಗಿ ಹಂಜಾದ್ ಹುಸೇನ್, ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಇಲಿಯಾಜ್, ಕಾರ್ಯದರ್ಶಿಯಾಗಿ ಸುನಿಲ್, ಕಸಬಾ ಹೋಬಳಿ ಅಧ್ಯಕ್ಷರಾಗಿ ಪಿ.ಬಿ. ಸಂಪತ್‌ಕುಮಾರ್‌ರನ್ನು ನೇಮಕ ಮಾಡಲಾಯಿತು.
ಈ ವೇಳೆ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ, ಮುಖಂಡರಾದ ಲೋಹಿತ್, ಶಬ್ಬೀರ್, ಜಿ.ಎಂ. ಜಗದೀಶ್, ಮಂಡಿಮನೆ ಲಕ್ಷ್ಮಣ್, ಎಚ್.ಪಿ. ದೇವರಾಜ್, ಸುನೀಲ್, ಅಬ್ದುಲ್ ರಜಾಕ್, ನಾಗೇಂದ್ರ ಮತ್ತಿತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement