ಬಂದ್ಗೆ ಬೆಂಬಲ
ಮೂಡಿಗೆರೆ: ಕೇಂದ್ರ ಸರ್ಕಾರ ಏಕಾಏಕಿ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳುತ್ತಿರುವ ಡೀಸೆಲ್ ಬೆಲೆಯನ್ನು ಲೀಟರ್ ಒಂದಕ್ಕೆ ರು. 12 ಂತೆ ಏರಿಸಿದೆ. ಇದರಿಂದ ದೇಶವ್ಯಾಪ್ತಿ ಸೇವೆ ಸಲ್ಲಿಸುತ್ತಿರುವ ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಸಾರಿಗೆ ಸಂಸ್ಥೆ ಹಾಗೂ ರೇಲ್ವೇ ಇಲಾಖೆ ಈ ಹೊರೆ ಹೊರಬೇಕಾಗಿದೆ ಎಂದು ಕ.ರಾ.ರ.ಸಂಸ್ಥೆಯ ಸ್ಟಾಪ್ ವರ್ಕರ್ಸ್ ಯೂನಿಯನ್ ಪ್ರದಾನ ಕಾರ್ಯದರ್ಶಿ ಕೆ. ಪೆದ್ದಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಫೆ.20 ರ ಬುಧವಾರದಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿ ವತಿಯಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಸಂಪೂರ್ಣ ಮುಷ್ಕರದಲ್ಲಿ ಮೂಡಿಗೆರೆ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಬುಧವಾರ ನಡೆಯುವ ಮುಷ್ಕರಕ್ಕೆ ವಾಹನ ಚಾಲಕರ ಮತ್ತು ಮಾಲೀಕರ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತ ಪಡಿಸಿವೆ.
ಕ್ರಿಕೆಟ್ ತರಬೇತಿಗೆಆಯ್ಕೆ ಪ್ರಕ್ರಿಯೆ
ಕೊಪ್ಪ: ಸುರಭಿ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನಿಂದ ಏ.15 ರಂದು ಪಟ್ಟಣದಲ್ಲಿ ನಡೆಸುವ ಉಚಿತ ಲೆದರ್ ಬಾಲ್ ಕ್ರಿಕೆಟ್ ತರಬೇತಿಗಾಗಿ ಆಯ್ಕೆ ಪ್ರಕ್ರಿಯೆ 24 ರಂದು ಬಾಳಗಡಿಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಕ್ಕಳು ಬಿಳಿ ಸಮವಸ್ತ್ರ ಮತ್ತು ಷೂ ಧರಿಸುವುದರ ಜೊತೆಗೆ ವಯಸ್ಸಿನ ದೃಡೀಕರಣಕ್ಕಾಗಿ ಶಾಲಾ ದಾಖಲೆ ಆಧಾರ್ ಕಾರ್ಡ್ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ತರತಕ್ಕದ್ದು ಎಂದು ತಿಳಿಸಿದ್ದು ಮಾಹಿತಿಗಾಗಿ, 9448472129 ಸಂಪರ್ಕಿಸ ಬಹುದಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.