ಯೋಜನೆ ಬಳಕೆಯಾದಲ್ಲಿ ಆರ್ಥಿಕ ಚೇತರಿಕೆ
ಕಡೂರು: ಸರ್ಕಾರ ನೀಡುವ ಸವಲತ್ತನ್ನು ರೈತರು ಸರಿಯಾಗಿ ಸದುಪಯೋಪಡಿಸಿಕೊಂಡಲ್ಲಿ ರೈತರು ಆರ್ಥಿಕವಾಗಿ ಚೇತರಿಕೆ ಹೊಂದಲು ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದರು.
ತೋಟಗಾರಿಕಾ ಇಲಾಖೆಯಿಂದ 2012-13ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಅಭಿವೃದ್ಧಿ ಯೋಜನೆಯಲ್ಲಿ ತಾಲೂಕಿನ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚಟ್ಟನಹಳ್ಳಿ ತಾಂಡ್ಯದ ಶ್ರೀಮಾರುತಿ ಟೊಮೆಟೋ ಬೆಳೆಗಾರರ ಸಂಘದ ಫಲಾನುಭವಿಗಳಿಗೆ 1.55 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಡೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲಕ್ಷ್ಮಣನಾಯ್ಕ, ಮಾಜಿ ಎಪಿಎಂಸಿ ಅಧ್ಯಕ್ಷ ಚಿಕ್ಕದೇವನೂರು ರವಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜಯ್, ಜಿಜೆಪಿ ಮುಖಂಡರಾದ ನಿಡಘಟ್ಟ ಲೋಕೇಶ್, ಗಿರೀಶ್, ಮಾರುತಿ ಟೊಮೆಟೋ ಬೆಳೆಗಾರರ ಸಂಘದ ಫಲಾನುಭವಿಗಳಾದ ಚಟ್ಟನಹಳ್ಳಿ ತಾಂಡ್ಯ ಮತ್ತು ಟಿ.ಬಿ. ಕಾವಲಿನ ಮಲ್ಲೇಶನಾಯ್ಕ, ಸೀನಾನಾಯ್ಕ, ನಾಗರಾಜನಾಯ್ಕ, ಸೋಮಶೇಖರನಾಯ್ಕ, ಗೋವಿಂದನಾಯ್ಕ, ರವಿಕುಮಾರ್, ಗಂಗೀಬಾಯಿ ಮತ್ತಿತರರು ಉಪಸ್ಥಿತರಿದ್ದರು.