ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾರ್ಮಿಕ ಸಂಘಟನೆ ಪ್ರತಿಭಟನೆ

Lingaraj Badiger
Updated On : 21 Feb 2013, 10:59 am

ಮೂಡಿಗೆರೆ: ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಸೇಲ್ ದರ ಹೆಚ್ಚಳದ ಹಿಂದೆ, ಸಾರಿಗೆ ನಿಗಮಗಳನ್ನು ದಿವಾಳಿ ಮಾಡುವ ಹುನ್ನಾರವಿದೆ ಎಂದು ಕರಾರಸಾಸಂಸ್ಥೆಯ ಸಾರಿಗೆ ನಿಗಮಗಳ ಮೂಡಿಗೆರೆ ವಲಯದ ಕಾರ್ಮಿಕ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೆದ್ದಣ್ಣ ಆರೋಪಿಸಿದರು.
ತಾಲೂಕಿನ ಬಿದರಹಳ್ಳಿಯ ಕರಾರಸಾಸಂಸ್ಥೆಯ ಘಟಕದ ಸಮೀಪದಲ್ಲಿರುವ ಸಂಘದ ಕಚೇರಿಯ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ಡಿಸೇಲ್ ಏರಿಕೆ ನಿತಿಯನ್ನು ಖಂಡಿಸಿ. ಬುಧವಾರದಂದು ಎಐಟಿಯುಸಿ ಸಂಘಟನೆ ಆಶ್ರಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾರಿಗೆ ನಿಗಮಗಳು, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ರಿಯಾಯಿತಿ ನೀಡಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಸಾಮಾಜ ಸೇವೆಯಲ್ಲಿ. ತೊಡಗಿರುವ ಸಾರ್ವಜನಿಕ ಕ್ಷೇತ್ರದ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಡಿಸೇಲ್ ಬೆಲೆಯನ್ನು ಖಾಸಗಿ ವಾಹನಗಳು ಖರೀದಿಸುವ ದರಕ್ಕಿಂತ ರು. 12 ಹೆಚ್ಚಳಗೊಳಿಸಿದೆ. ಇದರಿಂದಾಗಿ ಖಾಸಗಿ ವಾಹನಗಳಿಗೆ ಕಡಿಮೆ ದರದಲ್ಲಿ ಡಿಸೇಲ್ ದೊರಕುವುದರಿಂದ ಖಾಸಗಿ ಬಸ್‌ಗಳು. ಕರಾರಸಾಸಂಸ್ಥೆಯ ಬಸ್ ದರಕ್ಕಿಂತ ಕಡಿಮೆ ದರದಲ್ಲಿ ಸಂಚರಿಸುತ್ತಿವೆ. ಈ ಡಿಸೇಲ್ ಬೆಲೆಯ ಹಿಂದೆ ಖಾಸಗೀ ವಾಹನಗಳ ಲಾಬಿಯಿದ್ದು, ಸಾರಿಗೆ ನಿಗಮಗಳನ್ನು ದಿವಾಳಿ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು. ತಕ್ಷಣವೇ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಘಟಕದ ಅಧ್ಯಕ್ಷ ರಾಮು, ಕಾರ್ಯದರ್ಶಿ ರವಿಕುಮಾರ್, ಅಚ್ಯುತ್‌ಕುಮಾರ್, ಉಲ್ಲಾಸ್, ಬಸವೇಗೌಡ, ಮಂಜುನಾಥ್, ಉಮೇಶ್, ಆನಂದ್ ಚಾಲಕರು, ನಿರ್ವಾಹಕರು, ಕಾರ್ಮಿಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement