ನಾಗಪ್ರತಿಷ್ಠೆ, ಕುಂಭಾಭಿಷೇಕ
ನರಸಿಂಹರಾಜಪುರ: ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಬುಧವಾರ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯ ಸ್ವಾಮಿಯ ಪ್ರತಿಷ್ಠೆ, ನಂದೀಶ್ವರ ಸ್ಥಾಪನೆ, ಬನಶಂಕರೀ ಅಮ್ಮನವರ ಪ್ರತಿಷ್ಠಾಪನೆ, ನಾಗಪ್ರತಿಷ್ಠೆ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಕೊಪ್ಪ ಫಾಲಚಂದ್ರ ಯಜ್ಞ ಕ್ಷೇತ್ರದ ವೇ.ಬ್ರ.ಕೆ.ಆರ್. ಸತೀಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬುಧವಾರ ಬೆಳಗ್ಗೆ ಪ್ರತಿಷ್ಠಾಪನೆ, ಅಷ್ಠಬಂಧ ಲೇಪನ ನಡೆಯಿತು. ನಂತರ ಕಲಶ ಸ್ಥಾಪನೆ, ಪ್ರತಿಷ್ಠಾಂಗ ಹೋಮ, ಕಲಾತತ್ವ ಹೋಮ, ಪವಮಾನ ಹೋಮ, ನವಗ್ರಹ ಸಹಿತ ಪ್ರಾಯಶ್ಚಿತ್ತ ಹೋಮ, ಪೂರ್ಣಾಹುತಿ, ಕಲಶಾಭಿಷೇಕ, ಕಲ್ಪೋಕ್ತ ಪ್ರಸನ್ನ ಪೂಜೆ, ಶಿಖರ ಪ್ರತಿಷ್ಠೆ, ನಾಗಸನ್ನಿಧಿಯಲ್ಲಿ ಪವಮಾನ ಸೂಕ್ತಾಭಿಷೇಕ, ಪ್ರಸನ್ನಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.