ಹೆನ್ರಿ ಕೊಲೆ: ಆರೋಪಿಗಳ ಬಂಧನ
ಕೊಪ್ಪ: ತಾಲೂಕಿನ ಅಂದಗಾರಿನಲ್ಲಿ ಕಳೆದ ತಿಂಗಳ 13ರಂದು ಸಾವಿಗೀಡಾಗಿದ್ದ ಹೆನ್ರಿ ಕೊರಿಯಾ (35) ಕೊಲೆ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಹೆನ್ರಿ ಕೊರಿಯಾನ ಪತ್ನಿಯ ಅಕ್ಕನ ಗಂಡ ತಿರ್ಥಹಳ್ಳಿಯ ರಾಬರ್ಟ್ಹಾಗೂ ಅವರ ಸಹಾಯಕ ಜಾಕಿ ಮತ್ತು ಇತರರು ಸಂಚು ಹೂಡಿ ಕೊಲೆಗೈದಿದ್ದಾರೆಂದು ತನಿಖೆಯಿಂದ ಗೊತ್ತಾಗಿದ್ದು ರಾಬರ್ಟ್ ಹಾಗೂ ಜಾಕಿಯನ್ನು ಬಂಧಿಸಲಾಗಿದೆ.
ಇನ್ನಿಬ್ಬರು ಆರೋಪಿ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧಕಾರ್ಯ ನಡೆದಿದೆ. ಹೆನ್ರಿ ಕೊರಿಯಾ ಮೇಲೆ ಮರಣಾಂತಿಕ ಹಲ್ಲೆ ಮಾಡಿ ಮರುದಿನ ಆತನ ಮೊಬೈಲ್ಗೆ ಎಂದೂ ಕರೆಮಾಡಿದ ರಾಬರ್ಟ್ ಕರೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆ ಮಾಡಲಾಗಿದ್ದು ಕೊಲೆಗೆ ಬಳಸಲಾಗಿದ್ದ ಸಲಾಕೆ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ನಿರೀಕ್ಷಕ ಸಂಗಮೇಶ್ ಪಾಟೀಲ್ ಕಾರ್ಯ ನಿರ್ವಹಿಸಿದ್ದರು.