ಜೆಡಿಎಸ್‌ನಿಂದ 3 ನಾಮಪತ್ರ
ನರಸಿಂಹರಾಜಪುರ: ಪಪಂ ಚುನಾವಣೆಗೆ ಗುರುವಾರ ಜೆಡಿಎಸ್‌ನಿಂದ 3 ನಾಮ ಪತ್ರಗಳು ಸಲ್ಲಿಕೆಯಾಗಿವೆ.
ಗುರುವಾರ ಜೆಡಿಎಸ್‌ನ ಎ.ಎಸ್. ಕೃಷ್ಣಯ್ಯ, ಸಿ.ಆರ್. ಭಾನುಮತಿ ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಎಸ್.ಎಸ್. ಶಾಂತಕುಮಾರ್, ಇ.ಸಿ. ಜೋಯಿ, ಎಸ್.ಎಸ್. ಸಂತೋಷ ಕುಮಾರ್, ದೀಪ ಉಮಾಶಂಕರ್, ಸೋಜ, ಎನ್.ಎಸ್. ಪ್ರಸನ್ನಕುಮಾರ್, ಕಣುವೆ ವಿನಯ ಇದ್ದರು.
ಕಾಂಗ್ರೆಸ್ ಕಚೇರಿಗೆ ಅಭ್ಯರ್ಥಿಗಳಾಗಲು 42 ಅರ್ಜಿಗಳು ಬಂದಿವೆ. ಈಗಾಗಲೇ ಕೋರಂ ಕಮಿಟಿ ಸಭೆ ನಡೆದು ಅಂತಿಮ ಆಯ್ಕೆಯಾಗಿ ಜಿಲ್ಲಾ ಸಮಿತಿಗೆ ಕಳಿಸಲಾಗಿದ್ದು ಶುಕ್ರವಾರ ಸಂಜೆ ಅಂತಿಮ ಪಟ್ಟಿ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ. ಜೆಡಿಎಸ್ ಅಂತಿಮ ಪಟ್ಟಿ ತಯಾರಾಗಿದ್ದು ಶುಕ್ರವಾರ ಮಧ್ಯಾಹ್ನ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಪಂನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ಮುಂದುವರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ಆಸಕ್ತಿ ವಹಿಸಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.