ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಳೆಯಿಂದ ಎನ್ನೆಸ್ಸೆಸ್ ವಾರ್ಷಿಕ ಶಿಬಿರ

Lingaraj Badiger
Updated On : 22 Feb 2013, 11:21 am

ನರಸಿಂಹರಾಜಪುರ: ತಾಲೂಕಿನ ಕಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯಿಂದ ಫೆ.23ರಿಂದ 7 ದಿನಗಳ ಕಾಲ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ ಎಂದು ಶಿಬಿರಾಧಿಕಾರಿ ಎಸ್.ಎ. ನರಸಿಂಹ ತಿಳಿಸಿದ್ದಾರೆ.  
ಫೆ.23ರ ಶನಿವಾರ ಮದ್ಯಾಹ್ನ 4.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯ ಆಹಾರ ಮತ್ತು  ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಉದ್ಘಾಟಿಸಲಿದ್ದಾರೆ. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಸಿ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಕು.ವಿ.ವಿ.ರಾ.ಸೇ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್, ಕೊಪ್ಪ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ಡಿ. ಬಾಲಕೃಷ್ಣ, ಸಮಿತಿ ಸದಸ್ಯ ಎ. ರಮೇಶರಾವ್ ಉಪಸ್ಥಿತರಿವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಟಿ. ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
7 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕಮಾಲಾಪುರ ಶಾಲಾ ಆವರಣ ಮತ್ತು ಆಟದ ಮೈದಾನ ಸ್ವಚ್ಛತೆ,  ಏಡ್ಸ್ ಬಗ್ಗೆ ಅರಿವು, ಅಂಗನವಾಡಿ ಕೇಂದ್ರದ ಉದ್ಯಾನವನ ಸ್ವಚ್ಛಗೊಳಿಸುವುದು, ಕೃಷಿ, ಪಶುಪಾಲನೆ, ಆರೋಗ್ಯ, ವ್ಯಕ್ತಿತ್ವ ವಿಕಸನ ಬಗ್ಗೆ ತಜ್ಞರಿಂದ ಮಾಹಿತಿ, ಕಾನೂನು ಅರಿವು ಕಾರ್ಯಕ್ರಮ, ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆ ಹಾಗೂ ಪ್ರತಿದಿನ ಶಿಬಿರಾರ್ಥಿಗಳಿಂದ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement