ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ಜಿಲ್ಲಾ ಉಪಾಧ್ಯಕ್ಷಬೆಳ್ಳಿ ಪ್ರಕಾಶ್ ಕೆಜೆಪಿಗೆ

Lingaraj Badiger
Updated On : 22 Feb 2013, 11:27 am

ಕಡೂರು: ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ,  ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆಯುವ ಮೂಲಕ ಕೆಜೆಪಿಗೆ ಸೇರ್ಪಡೆಗೊಂಡರು.
 ಕಡೂರು ಪಟ್ಟಣದ ಮರವಂಜಿ ವೃತ್ತದಲ್ಲಿರುವ ಕೆಜೆಪಿ ಕಚೇರಿಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಮತ್ತು ತಾಲೂಕು ಘಟಕದ ಅಧ್ಯಕ್ಷ ಕಾಮನಕೆರೆ ಶಶಿಧರ್ ಸಮ್ಮುಖದಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಸದಸ್ಯತ್ವ ನೀಡುವ ಮೂಲಕ ಬೆಳ್ಳಿಪ್ರಕಾಶ್ ಅವರನ್ನು ಕೆಜೆಪಿಗೆ ಬರಮಾಡಿಕೊಳ್ಳಲಾಯಿತು.
ಮತ್ತೊಂದು ಬಲ: ನಂತರ ಮಾತನಾಡಿದ ಸುರೇಶ್, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಬೆಳ್ಳಿಪ್ರಕಾಶ್ ಅವರು ಬಿಜೆಪಿ ತೊರೆದು ವಿಧ್ಯುಕ್ತವಾಗಿ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಪಕ್ಷಕ್ಕೆ ಮತ್ತೊಂದು ಬಲ ಬಂದಿರುವುದರಿಂದ ಕಡೂರು ಹಾಗೂ ಬೀರೂರು ಪುರಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮುಖಂಡರೊದಿಗೆ ಚರ್ಚಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಾಗಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
  ಕಡೂರು ಹಾಗೂ ಬೀರೂರಿನ ಎರಡೂ ಪುರಸಭೆ ಸೇರಿದಂತೆ ಜಿಲ್ಲಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ಕೆಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಪಕ್ಷಕ್ಕೆ ತೆಂಗಿನಕಾಯಿ ಚಿಹ್ನೆ ದೊರಕಿದ್ದು, ಪುರಸಭಾ ಚುನಾವಣೆಯ ಕಣಕ್ಕಿಳಿಯವ ಅಭ್ಯರ್ಥಿಗಳಿಗೆ ತೆಂಗಿನಕಾಯಿಯ ಅಧಿಕೃತ ಚಿಹ್ನೆಯ ಮೂಲಕ ಚುನಾವಣೆ ಎದುರಿಸಲಾಗುವುದು  ಎಂದರು.    
ಸಂಖ್ಯೆ ಹೆಚ್ಚಳ: ಬಿಜೆಪಿ ನಡವಳಿಕೆಯಿಂದ ಬೇಸತ್ತಿರುವ ಹಲವು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಕೆಜೆಪಿಗೆ ಬರುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಂದಲೂ ಕೆಜೆಪಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಚುನಾವಣೆ ಬರಲಿರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ಬದಲಾಗಿ ಈ ಚುನಾವಣೆಯ ಫಲಿತಾಂಶವು ಪಕ್ಷಕ್ಕೆ ನೈತಿಕ ಸ್ಥೈರ್ಯ ತುಂಬಲಿದೆ ಎಂದರು.
 ಗ್ರಾಮೀಣ ಪ್ರದೇಶಗಳಲ್ಲಿ ಕೆಜೆಪಿ ಬಲಯುತವಾಗಿ ಬೆಳೆಯುತ್ತಿದೆ. ಪಟ್ಟಣಗಳೇ ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೆಜೆಪಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದ ಪಕ್ಷ ಮುಂಬರಲಿರುವ ದಿನಗಳಲ್ಲಿ  ವಿಧಾನಸಭಾ ಚುನಾವಣೆಯಲ್ಲಿಯೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದರು.
ಸದ್ಯಕ್ಕೆ ನಮ್ಮ ಮುಂದಿರುವ ಪುರಸಭೆ ಮತ್ತು ನಗರಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಅದೇ ರೀತಿಯಲ್ಲಿ ಕಡೂರು ಬೀರೂರು ಪುರಸಭೆ ಚುನಾವಣೆಯಲ್ಲಿ ಬೆಳ್ಳಿಪ್ರಕಾಶ್ ಹಾಗು ಕಾಮನಕೆರೆ ಶಶಿಧರ್ ನೇತೃತ್ವದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಕೆಜೆಪಿ ಎರಡೂ ಪುರಸಭೆಗಳಲ್ಲಿ ಗೆಲವು ಸಾಧಿಸಲು ಎಲ್ಲ ರೀತಿಯ ರೂಪು ರೇಷೆ ಮಾಡಿಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಬೆಳ್ಳಿಪ್ರಕಾಶ್ ಅವರು ಪಕ್ಷ ಸೇರುವುದರ ಜೊತೆ ಸಾವಿರಾರು ಕಾರ್ಯಕರ್ತರೊಂದಿಗೆ ಪಕ್ಷವನ್ನು ಉತ್ತಮವಾಗಿ ಸಂಘಟಿಸಿ ಶಕ್ತಿಯ ತುಂಬಬೇಕು ಎಂದು ಹೇಳಿ ಶುಭ ಹಾರೈಸಿದರು.
  ಕೆಜೆಪಿ ಮುಖಂಡ ಕಾಮನಕೆರೆ ಶಶಿಧರ್, ಆನಂದಪ್ಪ, ಜಿಲ್ಲಾ ಉಪಾಧ್ಯಕ್ಷ ಕುರುಬಗೆರೆ ಮಹೇಶ್, ಸಣ್ಣಕ್ಕಿ ಕೊಪ್ಪಲು ಗಂಗಾಧರ್, ಕುಶಲ್ ಕುಮಾರ್, ಶಂಕರಮೂರ್ತಿ, ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement