ಲೈಂಗಿಕ ಕಿರುಕುಳ: ಆರೋಪಿ ಬಂಧನ
ಶೃಂಗೇರಿ: ಪಟ್ಟಣದ ಕಲ್ಕಟ್ಟೆ ಎಂಬಲ್ಲಿ ಶಾಲಾ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಪೋಲಿಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆರೋಪಿ ಸೆಲ್ವರಾಜ್ (39) ಬಾಲಕಿಯರಿಗೆ ಚಾಕಲೇಟ್ ನೀಡುವುದಾಗಿ ಪುಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕ್ರೀಡಾಕೂಟ
ಶೃಂಗೇರಿ: ಜನಸ್ಪಂದನ ವೇದಿಕೆ ಆಶ್ರಯದಲ್ಲಿ ತಾಲೂಕಿನ ಅಡ್ಡಗದ್ದೆ ಪಂಚಾಯಿತಿ ಕಾವಡಿ ಗದ್ದೆ ಬಯಲಿನಲ್ಲಿ ಫೆ 23.24 ರಂದು ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಬಾಳೆಮನೆ ನಟರಾಜ್ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಭಾನುವಾರ ನಾಗರಿಕ ಸನ್ಮಾನ ಸಮಾರಂಭ ನೆರವೇರಲಿದೆ. ಸಚಿವ ಡಿ.ಎನ್. ಜೀವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.