ಏಣಿ ಉರುಳಿ ಬಿದ್ದು ವ್ಯಕ್ತಿ ಸಾವು
ನರಸಿಂಹರಾಜಪುರ: ಮಡಬೂರಿನ ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿಯು ಉರುಳಿ ಪಕ್ಕದ ವಿದ್ಯುತ್ ತಂತಿ ಮೇಲೆ ಬಿದ್ದು ಗೋವಿಂದ (28) ಎಂಬ ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಪಾಚ್ಯಾಡ್ ಎಂಬ ಊರಿನಿಂದ ಕೂಲಿಗೆ ಬಂದ 50 ಕಾರ್ಮಿಕರ ತಂಡದಲ್ಲಿ ಗೋವಿಂದ ಬಂದಿದ್ದ. ಬೆಳಿಗ್ಗೆ ಕಾಫಿ ತೋಟದಲ್ಲಿ ಅಲ್ಯುಮಿನಿಯಂ ಏಣಿಯಿಂದ ಕಾಳುಮೆಣಸು ಕೊಯ್ಯವಾಗ ಏಣಿ ಆಯತಪ್ಪಿ ಹತ್ತಿರದ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.