ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಿಕ್ಕಿರಿದ ಜನ

Lingaraj Badiger
Updated On : 23 Feb 2013, 11:26 am

ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ಖಾಲಿ ಖಾಲಿಯಾಗಿದ್ದ ಪಟ್ಟಣ ಪಂಚಾಯಿತ್ ಶುಕ್ರವಾರ ಜನ ಜಂಗುಳಿಯಿಂದ ಕೂಡಿತ್ತು. ಪಪಂ ಚುನಾವಣೆ ನಾಮಪತ್ರ ಸಲ್ಲಿಸಲು ಕಡೆಯ ದಿನ ಸಮೀಪಿಸುತ್ತಿದ್ದಂತೆಯೇ ಎಲ್ಲಾ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಆಗಮಿಸಿ ತುರಾತುರಿಯಲ್ಲಿ ನಾಮಪತ್ರ ಸಲ್ಲಿಸಲು ಕಿಕ್ಕಿರಿದು ತುಂಬಿದ್ದರು. ಮೂಡಿಗೆರೆ ಪಪಂನ 11 ವಾರ್ಡ್‌ಗಳಿಗೆ 29 ನಾಮಪತ್ರಗಳು ಸಲ್ಲಿಸಿದ್ದಾರೆ. ಬಿಜೆಪಿ 11, ಕೆಜೆಪಿ 8, ಎಸ್‌ಡಿಪಿಐ 4, ಜೆಡಿಎಸ್ 3, ಬಿಎಸ್‌ಆರ್ 2, ಪಕ್ಷೇತರ 1ವಾರ್ಡ್‌ಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
74 ನಾಮಪತ್ರ
ತರೀಕೆರೆ: ಮಾ.7ರಂದು ನಡೆಯಲಿರುವ ತರೀಕೆರೆ ಪುರಸಭೆ ಸದಸ್ಯರ ಚುನಾವಣೆಗೆ ಶುಕ್ರವಾರ 74 ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಇಲ್ಲಿವರೆಗೆ ಒಟ್ಟು 98 ನಾಮಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಪುರಸಭೆಯ ಒಟ್ಟು 23 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.   
ಕೆಜೆಪಿಯಿಂದ ನಾಮಪತ್ರ ಸಲ್ಲಿಕೆ
ಮೂಡಿಗೆರೆ: ಕೆಜೆಪಿ ಪಕ್ಷದಿಂದ ಮೂಡಿಗೆರೆ ಪಪಂ ಚುನಾವಣೆಯಲ್ಲಿ ಸ್ಪರ್ಧಿಸಲು 9 ವಾರ್ಡ್‌ಗಳಿಂದ 9 ಮಂದಿ  ಅಭ್ಯರ್ಥಿಗಳು ಮೆರವಣಿಗೆಯಲ್ಲಿ ತೆರಳಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. 1ನೇ ವಾರ್ಡ್‌ನಿಂದ ರೂಪಾ, 2  ವಾರ್ಡ್‌ನ ಎಚ್.ಎಸ್. ಕಾಳಮ್ಮ, 3ನೇ ವಾರ್ಡ್‌ನ ಆಶಾ ನಯೀಮ್, 5ನೇ ವಾರ್ಡ್‌ನ ಮಹಮ್ಮದ್ ಫೈರೋಝ್, 7ನೇ ವಾರ್ಡ್‌ನ ಬಿ.ಡಿ. ಶಾರದಾ, 8ನೇ ವಾರ್ಡ್ ಖದೀರ್ ಬಾಬು, 9 ನೇ ವಾರ್ಡ್ ಬಸವರಾಜ್, 11ನೇ ವಾರ್ಡ್ ಅಭಿಮಾನ್(ಎಸ್‌ಟಿಡಿ ಅಭಿ) ಕಣಕ್ಕಿಳಿದಿದ್ದಾರೆ. ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ಕೊಟ್ಟಿಗೆಹಾರ ಆದರ್ಶ ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ಪಪಂ: 21 ನಾಮಪತ್ರ
ಶೃಂಗೇರಿ: ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ  ಸ್ಥಳೀಯ ಸಂಸ್ಥೆ ಯುನಾವಣೆಗೆ ಈವರೆಗೆ 21 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿಯಿಂದ 19 ನಾಮಪತ್ರಗಳು ಸಲ್ಲಿಸಲ್ಪಟ್ಟವು. ಶನಿವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 27 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಕಳೆದೆರೆಡು ದಿನಗಳಿಂದ ಚುನಾವಣೆ ಕಾವು ಏರತೊಡಗಿದ್ದು, ವಿವಿಧ ರಾಜಕೀಯ ಪಕ್ಷಗಳು ತೆರೆಮರೆಯ ಹಿಂದೆ ರಾಜಕೀಯ ಕಸರತ್ತು ನಡೆಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement