ಪಪಂ ಚುನಾವಣೆ: ಬಿಜೆಪಿ ಪಟ್ಟಿ ಬಿಡುಗಡೆ
ಮೂಡಿಗೆರೆ: ಮೂಡಿಗೆರೆ ಪಟ್ಟಣ ಪಂಚಾಯತ್ಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.
1ನೇ ವಾರ್ಡ್ನಿಂದ ರಾಗಿಣಿ ಜಾನಪ್ಪ, 2 ಸುಶಿಲಾ, 3 ಅನ್ನಪೂರ್ಣ, 4 ಕೆ.ವಿ. ನಯನ ಲೋಕಪ್ಪಗೌಡ, 5. ಜಿ.ಬಿ.ಧರ್ಮಪಾಲ್, 6. ಬಿ.ಎನ್. ರಾಮಕೃಷ್ಣ, 7. ಪೂರ್ಣಿಮಾ ಮಲ್ಯ, 8. ಮೊಹಮ್ಮದ್ ಇಬ್ರಾಹೀಂ, 9. ಲತಾ ಲಕ್ಷ್ಮಣ್, 10. ಉಬೇದುರ್ ರೆಹಮಾನ್, 11 ಎಚ್.ಡಿ. ರಾಮೇಗೌಡ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಪಟ್ಟಣ ಪಂಚಾಯತ್ ಚುನಾವಣಾಧಿಕಾರಿ ಎದುರು ಹಾಜರಾಗಿ ನಾಮಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಕೆ. ಪ್ರಾಣೇಶ್, ಜಿ.ಪಂ.ಸದಸ್ಯ ಅರೆಕುಡಿಗೆ ಶಿವಣ್ಣ, ನಗರಾಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ಬಿ.ಎನ್. ಜಯಂತ್, ಕಲ್ಲೇಶ್, ಜಿಲ್ಲಾ ಉಪಾಧ್ಯಕ್ಷ ಜೆ.ಎಸ್. ರಘು, ಟಿ. ಹರೀಶ್, ಹೆಚ್.ಪಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ ಕಾರ್ಯಕರ್ತರನ್ನು ಪಕ್ಷದ ಶಾಲನ್ನು ಹೊದಿಸಿ ಬರಮಾಡಿಕೊಳ್ಳಲಾಯಿತು.