ವಾಸವಿ ಮಹಿಳಾ ಮಂಡಳಿ ಸುವರ್ಣ ಮಹೋತ್ಸವ
ಚಿಕ್ಕಮಗಳೂರು: ನಗರದ ಶ್ರೀ ವಾಸವಿ ಮಹಿಳಾಮಂಡಳಿ ಸುವರ್ಣ ವಾರ್ಷಿಕ ಮಹೋತ್ಸವ ಸಂಭ್ರಮ ಫೆ.24ರಂದು ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ರಜನಿ ಸತೀಶ್ ತಿಳಿಸಿದ್ದಾರೆ.
ಭಾನುವಾರ ಸಂಜೆ 5.30ಕ್ಕೆ ಸುವರ್ಣ ಮಹೋತ್ಸವವನ್ನು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷೆ ಸುಶೀಲಾ ಬಾಲಕೃಷ್ಣ ಉದ್ಘಾಟಿಸುವರು. ಉಪಾಧ್ಯಕ್ಷರಾದ ಪಾರ್ವತಿ ಎಸ್.ಎನ್. ಶೆಟ್ಟಿ, ಭದ್ರಾವತಿ ವಾಸವಿ ಮಂಡಳಿ ಅಧ್ಯಕ್ಷೆ ಚಂದ್ರಕಲಾ ವಿ. ಮೂರ್ತಿ, ಲಯನ್ಸ್ ಮಾಜಿ ಅಧ್ಯಕ್ಷ ಬಿ.ಕೆ. ಸತೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಎ. ವಾಸುದೇವಮೂರ್ತಿ, ಚಿಕ್ಕಮಗಳೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ. ವೆಂಕಟಸುಬ್ಬರಾವ್, ವಾಸವಿ ಸೊಸೈಟಿ ಅಧ್ಯಕ್ಷ ಶ್ರೀಧರಮೂರ್ತಿ, ವಾಸವಿ ಸೇವಾ ಟ್ರಸ್ಟ್ ಅಧ್ಯಕ್ಷ ಬದ್ರಿನಾಥ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ, ಯುವಜನ ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ ಉಪಸ್ಥಿತರಿರುವರು.
ವಾಸವಿ ವೈಭವಂ ಎಂಬ ನೃತ್ಯರೂಪಕವನ್ನು ಗಾಯತ್ರಿ ನಟರಾಜ್ ನಿರ್ದೇಶನದಲ್ಲಿ ಮಂಡಳಿ ಸದಸ್ಯರು ಅಭಿನಯಿಸುವರು.
ಉದಯಸಿಂಹ ನೇತೃತ್ವದಲ್ಲಿ ಶಿವನಭಜನೆ, ಪ್ರೇಮ ಕೋದಂಡರಾಮಶೆಟ್ಟಿ ನೇತೃತ್ವದಲ್ಲಿ ಭಗವದ್ಗೀತೆಗಳ 10 ಶ್ಲೋಕಗಳ ಸಾಮೂಹಿಕ ಗಾಯನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.