ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೈದರಾಬಾದ್ ಸ್ಫೋಟ: ಜೆಡಿಎಸ್ ಪ್ರತಿಭಟನೆ

Lingaraj Badiger
Updated On : 23 Feb 2013, 11:19 am

ಚಿಕ್ಕಮಗಳೂರು: ಹೈದರಾಬಾದ್‌ನ ದಿಲ್ ಸುಖ್ ನಗರದಲ್ಲಿ ಗುರುವಾರ ಬಾಂಬ್ ಸ್ಪೋಟಿಸಿರುವ ಉಗ್ರರನ್ನು ಬಂಧಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
   ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡು ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
   ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಎಲ್. ಭೋಜೆಗೌಡ ಮಾತನಾಡಿ, ಉಗ್ರರ ಬಾಂಬ್ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗಿರುವುದು ದುಖಃದ ವಿಷಯ, ಈ ಘಟನೆಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ತಲಾ 10 ಲಕ್ಷ ನೀಡಬೇಕು. ಗಾಯಾಳುಗಳ ಬಗ್ಗೆ ಎಚ್ಚರವಹಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ವಂಸಕ ಕೃತ್ಯಗಳು ಹೆಚ್ಚು: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಬಾಂಬ್ ಸ್ಪೋಟ, ಅತ್ಯಾಚಾರ ಪ್ರಕರಣ ಸೇರಿದಂತೆ ವಿದ್ವಂಸಕ ಕೃತ್ಯಗಳು ಹೆಚ್ಚಾಗುತ್ತಿದೆ ಇದರಿಂದ ಜನರ ನೆಮ್ಮದಿ ಕೆಡಿಸಿದಂತಾಗಿದೆ.  ದಾಳಿಕೋರರನ್ನು ಶೀಘ್ರವೇ ಬಂಧಿಸಿ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರದ ನಿರ್ಲಕ್ಷ್ಯವೇ ಕಾರಣ: ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ, ಹೈದರಾಬಾದ್ ದುರಂತದಲ್ಲಿ ಹಲವರು ಸಾವನ್ನಪ್ಪಿ ಮತ್ತೆ ಕೆಲವರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ, ಯಾವುದೇ ದುರ್ಘಟನೆ ನಡೆದ ನಂತರ ದೇಶಾದ್ಯಂತ ಕಟ್ಟೆಚ್ಚರ ವಹಿಸುವ ನಿರ್ಧಾರಕ್ಕೆ ಸರ್ಕಾರ ಮುಂದಾಗುತ್ತದೆ.
   ಆದರೆ, ಸ್ಪೋಟದ ಸಂಚಿನ ವಿಷಯದ ಬಗ್ಗೆ ಕುರುಹುಗಳಿದ್ದರೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅಮಾಯಕ ಜೀವಗಳು ಬಲಿಯಾಗಿರುವುದು ದುರ್ಧೈವದ ಸಂಗತಿ ಎಂದರು.
ನಗರಸಭೆ ಮಾಜಿ ಸದಸ್ಯ ದೇವಿಪ್ರಸಾದ್, ಜಿಲ್ಲಾಧ್ಯಕ್ಷ ಮಂಜಪ್ಪ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಕ್ಬರ್, ಚಂದ್ರಶೇಖರ್, ಜಯರಾಜ್ ಅರಸ್, ಎಂ.ಡಿ. ರಮೇಶ್, ದಕ್ಷಿಣಮೂರ್ತಿ, ಸೋಮೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

'ಹೈ' ಬಾಂಬ್ ಸ್ಫೋಟ: ಬಿಜೆಪಿ ಮುಖಂಡ ದೇವಾನಂದ್ ಖಂಡನೆ
ತರೀಕೆರೆ: ಹೈದರಾಬಾದ್‌ನ ದಿಲ್‌ಸುಖ್ ನಗರ ಮತ್ತಿತರ ಕಡೆ ಬಾಂಬ್ ಸ್ಫೋಟಗೊಳಿಸಿ ಹಲವಾರು ಅಮಾಯಕರ ಸಾವಿಗೆ ಕಾರಣರಾಗಿರುವ ಭಯೋತ್ಪಾದಕರ ಈ ಕೃತ್ಯ ಖಂಡನೀಯವಾದುದು ಎಂದು ಬಿಜೆಪಿ ಮುಖಂಡ ಆರ್.ದೇವಾನಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
   ಈ ದಾಳಿಯು ದೇಶದ ಮೇಲೆ ನಡೆದ ದಾಳಿಯಾಗಿದೆ. ಈ ಕೃತ್ಯದ ಹಿಂದಿರುವ ಉಗ್ರರನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಅವರು  ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement