ಇಂದು ವಿಟಿಯು ಮೈಸೂರು ವಿಭಾಗದ ಫುಟ್ಬಾಲ್
ದಾವಣಗೆರೆ: ವಿಶ್ವೇಶ್ವರಾಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಮೈಸೂರು ವಲಯದ ಅಂತರ ಕಾಲೇಜುಗಳ ಪುರುಷರ ಫುಟ್ಬಾಲ್ ಪಂದ್ಯಾವಳಿ ಫೆ.24ರಿಂದ ಮೂರು ದಿನಗಳ ಕಾಲ ನಗರದ ಯುಬಿಡಿಟಿ ಕಾಲೇಜಿನ ಆಶ್ರಯದಲ್ಲಿ ನಡೆಯಲಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಬೆಟ್ಟೇಗೌಡ, ಫೆ.24ರಂದು ಬೆಳಿಗ್ಗೆ 10ಕ್ಕೆ ಯುಬಿಡಿಟಿ ಕಾಲೇಜು ಮೈದಾನದಲ್ಲಿ ವಿವಿ ಕುಲಪತಿ ಡಾ. ಎಚ್. ಮಹೇಶ್ವರಪ್ಪ ಟೂರ್ನಿ ಉದ್ಘಾಟಿಸಲಿದ್ದು, ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ ಬಿ.ಎಸ್. ಗೌತಮ್, ಕಾಲೇಜು ಪ್ರಭಾರ ಪ್ರಾಚಾರ್ಯ ಪ್ರೊ. ಇ.ಎಸ್. ಪ್ರಕಾಶ್, ವಿವಿ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಎಂ. ಕಿರಣ ಪಾಲ್ಗೊಳ್ಳುವರು ಎಂದರು.
ವಿವಿಯ ಮೈಸೂರು ವಿಭಾಗದ 37 ಕಾಲೇಜುಗಳ ಸುಮಾರು 500 ಕ್ರೀಡಾಪಟುಗಳು ಪಾಲ್ಗೊಳ್ಳುವರು. ಯುಬಿಡಿಟಿ ಕಾಲೇಜು ಹಾಗೂ ಬಿಐಇಟಿ ಕಾಲೇಜು ಮೈದಾನದಲ್ಲಿ ಪಂದ್ಯಾವಳಿಯು ನಡೆಯಲಿದೆ.
ಮೇ ತಿಂಗಳಿನಲ್ಲಿ ವಜ್ರ ಮಹೋತ್ಸವ ಆಚರಿಸುವ ಚಿಂತನೆ ಇದೆ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ಆರ್. ರಮೇಶ ಇತರರು ಇದ್ದರು.