ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೊಲೆಗೆ ಯತ್ನ: ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ

Mainashree
Updated On : 24 Feb 2013, 12:28 pm

ಚಿಕ್ಕಮಗಳೂರು: ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಗೆ ಜಿಲ್ಲಾ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದೆ.
2011ರ ಜೂನ್ 12 ರಂದು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಶಿಗರ  ಗ್ರಾಮದ ಚಿಮ್ಮಟಗೆರೆ ನಿವಾಸಿ ಎಚ್. ಕುಮಾರ್ ಎಂಬುವರು ತನ್ನ ಮನೆಯ ಹಿಂಭಾಗದ ಗೊಬ್ಬರದ ಗುಂಡಿಗೆ ಪಕ್ಕದ ಮನೆಯ ದಿನೇಶ್ ಎಂಬಾತನು ನೀರು ಬೀಡುತ್ತಿದ್ದನ್ನು ಕಂಡು ನೀರು ಬಿಡದಿರುವಂತೆ ತಿಳಿಸಿದ್ದರು. ಜಮೀನು ವಿಚಾರದಲ್ಲಿ ಕುಮಾರ್ ಅವರೊಂದಿಗೆ ದ್ವೇಷ ಹೊಂದಿದ್ದ ದಿನೇಶ್, ಈ ಸಂದರ್ಭದಲ್ಲಿ ಅವರನ್ನು ಏಕಾಏಕಿ ನಿಂದಿಸಿ, ಅಟ್ಟಿಸಿಕೊಂಡು ಹೋಗಿ ಕತ್ತಿಯಿಂದ ಕುತ್ತಿಗೆಗೆ ಮತ್ತು ಕೈಗೆ ಕಡಿದು, ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಿ.ಎ. ಪಾಟೀಲ್ ಅವರು, ಆರೋಪಿ ದಿನೇಶ್‌ಗೆ ಕಠಿಣ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 20 ಸಾವಿರ ನೊಂದ ಕುಮಾರ್‌ಗೆ ಪರಿಹಾರ ನೀಡಲು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಆರ್. ಉಪಾಧ್ಯೆ ಮೊಕದ್ದಮೆಯನ್ನು ನಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement