ನಾಮಪತ್ರ: ಅವಕಾಶ ನೀಡದ ಅಧಿಕಾರಿಗಳು
ಚಳ್ಳಕೆರೆ: ಪುರಸಭೆಯ ಚುನಾವಣೆಗೆ ಎರಡನೇ ಬಾರಿ ಸ್ಪರ್ಧಿಸಲು ನಾಮಪತ್ರ ಕೈಯಲ್ಲಿಡಿದು ಆಗಮಿಸಿದ ಮಾಜಿ ಅಧ್ಯಕ್ಷೆ ಪಿ. ಷಂಶಾದ್ ಸಮಯ ಮೀರಿದ ಕಾರಣ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳು ಅವಕಾಶ ನೀಡಲಿಲ್ಲ.
ಅಧಿಕಾರಿಗಳ ಕ್ರಮವನ್ನು ಪಿ. ಷಂಶಾದ್ ಖಂಡಿಸಿದ್ದಾರಲ್ಲದೇ ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಯಲಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಮುಜೀಬ್ ಮತ್ತು ಪಿ. ತಿಪ್ಪೇಸ್ವಾಮಿ, ವಾಗ್ವಾದ ನಡೆಸಿದ್ದು ಕಾರಣರೆಂದು ಆರೋಪಿಸಿದ್ದಾರೆ.
ಚುನಾವಣಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಣ್ಣ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು ಕಚೇರಿ ಬಾಗಿಲಲ್ಲಿ ನಿಂತಿದ್ದ ಎಲ್ಲರನ್ನೂ ಒಳಗೆ ಕರೆದು ಬಾಗಿಲು ಹಾಕಲಾಯಿತು. ಹತ್ತು ನಿಮಿಷಗಳ ನಂತರ ಷಂಶಾದ್ ಆಗಮಿಸಿ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದರು. ಆದರೆ, ಕಾನೂನು ಪ್ರಕಾರ ನೀಡಲಿಲ್ಲ ಎಂದಿದ್ದಾರೆ.