ಮನೆಗಳ್ಳತನಕ್ಕೆ ವಿಫಲ ಯತ್ನ
ನರಸಿಂಹರಾಜಪುರ: ಮಲ್ಲಂದೂರಿನ ನಾಗಭೂಷಣ್ ಎಂಬವರ ಮನೆಗೆ ನುಗ್ಗಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಲ್ಲಂದೂರಿನ ಕೃಷಿಕರಾದ ಎಂ.ಎಸ್. ನಾಗಭೂಷಣ್ ಮತ್ತು ಅವರ ಕುಟುಂಬದವರು ಶಿವಮೊಗ್ಗದಲ್ಲಿ ಸಂಬಂಧಿಕರ ಮನೆ ಗೃಹ ಪ್ರವೇಶಕ್ಕೆ ಶುಕ್ರವಾರ ಸಂಜೆ ತೆರಳಿದ್ದರು.
ಮನೆಯಲ್ಲಿ ಕೆಲಸದವರಾದ ಎಂ.ಡಿ. ಗಣೇಶ ಹಾಗೂ ಆತನ ಪತ್ನಿ, ರಮೇಶ್ ಎಂಬವರು ಇದ್ದರು. ರಾತ್ರಿ 9.30ರ ಸುಮಾರಿಗೆ ವಿದ್ಯುತ್ ಇಲ್ಲದ ಸಮಯದಲ್ಲಿ ಮನೆಯ ಉಪ್ಪರಿಗೆಯಲ್ಲಿ ಶಬ್ದ ಕೇಳಿ ಬಂದಿದೆ.
ಆಗ ಗಣೇಶ ಮಹಡಿಗೆ ಹೋಗಿ ನೋಡುವಾಗ ಅಲ್ಲಿ ಕಳ್ಳನೊಬ್ಬ ನಿಂತಿರುವುದು ಕಂಡು ಬಂದಿದೆ. ಗಣೇಶನನ್ನು ನೋಡಿದ ತಕ್ಷಣ ಆ ಕಳ್ಳ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸರರಿಗೆ ದೂರು ನೀಡಲಾಗಿದೆ.