ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಂಗಭೂಮಿಯಿಂದ ಬೌದ್ಧಿಕ ಹಸಿವು ಮಾಯ

Mainashree
Updated On : 24 Feb 2013, 12:28 pm

ತರೀಕೆರೆ: ರಂಗಭೂಮಿ ನಮ್ಮ ಬೌದ್ಧಿಕ ಹಸಿವನ್ನು ನೀಗಿಸುತ್ತದೆ ಎಂದು ಚಲನಚಿತ್ರ ನಟರು ಹಾಗೂ ರಂಗ ನಿರ್ದೇಶಕರು ಮಂಡ್ಯ ರಮೇಶ್ ತಿಳಿಸಿದ್ದಾರೆ.
ಅವರು ಶಾಂತಿ ಚಾರಿಟಬಲ್ ಟ್ರಸ್ಟ್, ಅರುಣೋದಯ ವಿದ್ಯಾಸಂಸ್ಥೆ ತರೀಕೆರೆ, ನಟನ ಮೈಸೂರು ವತಿಯಿಂದ ಶನಿವಾರ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಾಡಾಗಿದ್ದ ಮಂಡ್ಯ ರಮೇಶ್ ನಿರ್ದೇಶಿಸಿರುವ ಮೂರು ಮಹತ್ವದ ನಾಟಕಗಳ ಪ್ರದರ್ಶನ ಮಂಡ್ಯ ರಮೇಶ್ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ
ಮಾತನಾಡುತ್ತಿದ್ದರು.
ವ್ಯಕ್ತಿತ್ವ ವಿಕಸನ- ನಾಟಕ ಮತ್ತು ರಂಗಭೂಮಿ ಈ ನೆಲಕ್ಕೆ ಅಂಟಿಕೊಂಡಿದೆ. ಭೂಮಿ ಅಂದರೆ ತಾಯಿ. ರಂಗಭೂಮಿ ಪ್ರಪಂಚದಲ್ಲೇ ಶ್ರೇಷ್ಟ ಭಾಷೆಯಾಗಿದೆ, ನಾಟಕ ಸಮಷ್ಟಿ ಪ್ರಜ್ಞೆ ಇರುವ ಮಾಧ್ಯಮವಾಗಿದೆ. ನಾಟಕದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ನಾಟಕಕ್ಕೆ ಎಲ್ಲರೂ ಬೇಕು. ರಂಗಭೂಮಿ ಮನುಷ್ಯ ಸಂಬಂಧವನ್ನು  ಬೆಸೆಯುವ ಏಕೈಕ ಮಾಧ್ಯಮವಾಗಿದೆ. ರಂಗಭೂಮಿ ತಾಯ್ತನ ಹೇಳಿಕೊಡಬೇಕು ಎಂಬುದೇ ಮೈಸೂರು ನಟನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾಷಾ ಸ್ಪಷ್ಟತೆ: ಕನ್ನಡ ರಂಗಭೂಮಿ ಶ್ರೇಷ್ಟ ಪ್ರಾಕಾರವನ್ನು ಹೊಂದಿದೆ. ಕಲಾವಿದರಿಗೆ ಕಲಾ ಪೋಷಕರು ಅತ್ಯಗತ್ಯ. ಕಲಾವಿದರಿಗೆ ಭಾಷಾ ಸ್ಪಷ್ಟತೆ ಅಗತ್ಯ. ಭಾರತದಲ್ಲಿ ಎಲ್ಲ ಕಡೆ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಮೈರೂರಿನಲ್ಲಿ  ಬೃಹತ್ ರಂಗಮಂದಿರ ನಿರ್ಮಿಸಲಾಗುತ್ತದೆ. ಅಲ್ಲಿ ರಂಗಕಲೆ, ಸಂಗೀತ, ಸಾಹಿತ್ಯ ಅಧಿಕೃತವಾಗಿ ಹೇಳಿಕೊಡಬೇಕು ಎನ್ನುವುದು ಮೈಸೂರು ನಟನಾದ ಉದ್ದೇಶವಾಗಿದೆ. ನಾಟಕ ನೋಡಿ ಎಲ್ಲರೂ ಸಂತೋಷಪಡಬೇಕು ಎಂದು ತಿಳಿಸಿದರು.
ಅರುಣೋದಯ ವಿದ್ಯಾಸಂಸ್ಥೆಯ ಡಾ. ಹರ್ಷ ಮಾತನಾಡಿ, ಶಾಲಾ ಮಕ್ಕಳು ನೆಡೆಸಿಕೊಟ್ಟ ತಿಂಡಿಮೇಳ ಅದ್ಭುತವಾಗಿ ಮೂಡಿಬಂದಿದೆ. ಮುಂದಿನ ವರ್ಷ ಅಂಧ ಮಕ್ಕಳಿಂದ ಯಕ್ಷಗಾನ ಪ್ರದರ್ಶನವನ್ನು ಸಂಸ್ಥೆ ವತಿಯಿಂದ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಉದ್ಘಾಟನೆ ನರವೇರಿಸಿ ಮಾತನಾಡಿ, ಮೊದಲು ನಮ್ಮನ್ನು ನಾವು  ಪ್ರೀತೀಸಬೇಕು. ಇರುವುದರ ಬಗ್ಗೆ ಚಿಂತಿಸಬೇಕು. ಇರೋದನ್ನೇ ಚೆನ್ನಾಗಿ ಬಳಸಿಕೊಳ್ಳಬೇಕು, ಸಂಸ್ಕೃತಿ  ಬೆಳೆಸುವಲ್ಲಿ ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕಾರ್ಯಕ್ರಮ ತುಂಬಾ ವೈಶಿಷ್ಟ್ಯಪೂರ್ಣವಾಗಿದೆ ಎಂದು
ತಿಳಿಸಿದರು.
ಶಿಕ್ಷಣ ನೀಡಿ: ಶಾಂತಿ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಜಿ.ಎಚ್. ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಕೆಲಸಕ್ಕೆ ಜನರು ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ರಂಗಭೂಮಿ, ನಾಟಕ ಮತ್ತು ಸಾಹಿತ್ಯವನ್ನು ಬೆಳೆಸಬೇಕು. ಟ್ರಸ್ಟ್ ವತಿಯಿಂದ ಹಾಸ್ಟೆಲ್, ವೃದ್ಧಾಶ್ರಮ ಸ್ಥಾಪಿಸಲಾಗುವುದು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಶಿವಮೊಗ್ಗ ಶ್ರೀ ಶಾರದಾ ಅಂಧ ಮಕ್ಕಳ ಶಾಲೆಯ ಟ್ರಸ್ಟಿ ಅಂಬಿಕಾ ಮಾತನಾಡಿದರು. ಶಾಲೆ ಮುಖ್ಯೋಪಾಧ್ಯಾಯಿನಿ ಗೌರಮ್ಮ, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement