ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲಾರಿ ಅಪಘಾತ: 4 ಸಾವು

Mainashree
Updated On : 24 Feb 2013, 12:27 pm

ತರೀಕೆರೆ: ಸಮೀಪದ ಕರಕುಚ್ಚಿ ಬಳಿಯ ಬಂಡೇಹಳ್ಳಿ ಸಂಪರ್ಕ ಸೇತುವೆ ಬಳಿ ಶನಿವಾರ ಸಂಜೆ ಸಂಭವಿಸಿದ ಬೋರ್ ಲಾರಿ ಅಪಘಾತದಲ್ಲಿ ನಾಲ್ಕು ಜನರು ಮೃತಪಟ್ಟಿದ್ದು, ಇತರ ಹತ್ತು ಜನರಿಗೆ ಗಾಯಗಳಾದ ಘಟನೆ ನಡೆದಿದೆ.
 ಕರಕುಚ್ಚಿ ಸಮೀಪದ ಬಂಡೇಹಳ್ಳಿ ಸಂಪರ್ಕ ಸೇತುವೆ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಬೋರ್ ಲಾರಿ ಸೇತುವೆಗೆ ಡಿಕ್ಕಿ ಹೋಡೆದು ಉರುಳಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ: ಛತ್ತೀಸ್‌ಗಡದ ಬೋರ್ ಲಾರಿ ಕರಕುಚ್ಚಿ ಕಡೆಗೆ ಶನಿವಾರ ಸಂಜೆ ಪ್ರಯಾಣಿಸುತ್ತಿತ್ತು. ಲಾರಿಯಲ್ಲಿ ಒಟ್ಟು 14 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
 ಮೃತರು ಛತ್ತೀಸ್‌ಗಡಕ್ಕೆ ಸಂಬಂಧಿಸಿದವರು ಮೃತಪಟ್ಟ ನಾಲ್ಕು ಮಂದಿಯ ಪೈಕಿ ನಜ್ಮಾನ್ (18) ಎಂಬುವರನ್ನು ಮಾತ್ರ ಗುರುತಿಸಲಾಗಿದೆ.
ಗಾಯಾಳುಗಳನ್ನು ತರೀಕೆರೆ ಮತ್ತು ಶಿವಮೊಗ್ಗ  ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಜಿಲ್ಲಾ ಪೊಲೀಸ್  ವರಿಷ್ಠ ಶಶಿಕುಮಾರ್, ತರೀಕೆರ ಗ್ರಾಮಾಂತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement