ಸುಕುಮಾರ್ರ ಪುರ ದರ್ಶನ ಪತ್ರಿಕೆ ಬಿಡುಗಡೆ
ನರಸಿಂಹರಾಜಪುರ: ನೂತನ ಪಾಕ್ಷಿಕ ಪತ್ರಿಕೆ ಪುರ ದರ್ಶನ ಬಿಡುಗಡೆ ಕಾರ್ಯಕ್ರಮವು ಪಟ್ಟಣ ಪಂಚಾಯ್ತಿ ಉದ್ಯಾನವನದಲ್ಲಿ ಶನಿವಾರ ನಡೆಯಿತು.
ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಪಿ.ಆರ್. ಸುಕುಮಾರ್ ಪತ್ರಿಕೆ ಬಿಡುಗಡೆ ಮಾಡಿ, ಪತ್ರಿಕೆಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್ ಮಾತನಾಡಿ, ತಪ್ಪನ್ನು ಮಾಡಿದಾಗ ಖಂಡಿಸಿ ಬರೆಯಿರಿ. ಉತ್ತಮ ಕೆಲಸ ಮಾಡಿದಾಗ ಅದನ್ನು ಗುರುತಿಸಿ ಬರೆಯಬೇಕು ಎಂದು ಸಲಹೆ ನೀಡಿದರು.
ಪುರ ದರ್ಶನ ಪತ್ರಿಕೆಯ ಸಂಪಾದಕ ಅಭಿನವ ಗಿರಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಮಾಲಾ ಗಿರಿರಾಜ್, ಪಪಂ ಮಾಜಿ ಸದಸ್ಯ ಸುಬಾನ್, ಜೇಸಿ ಸಂಸ್ಥೆ ಅಧ್ಯಕ್ಷ ಶೇಷಗಿರಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಶೋತ್ತಮ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜು, ಎನ್.ಎ. ಶೇಖಬ್ಬ ಉಪಸ್ಥಿತರಿದ್ದರು.