ಜೆಡಿಎಸ್‌ಗೆ ಪುರಸಭೆ ಆಡಳಿತ: ಜಿಪಂ ಸದಸ್ಯ ವಿಶ್ವಾಸ
ಬೀರೂರು: ಈ ಭಾರಿಯ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ವೈ.ಎಸ್.ವಿ ದತ್ತರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವು ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಸರಸ್ವತಿಪುರ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀರೂರು ಪುರಸಭೆಯ 23 ವಾರ್ಡುಗಳ ಪೈಕಿ 1 ಮತ್ತು 16ನೇ ವಾರ್ಡ್ ಹೊರತುಪಡಿಸಿ ಉಳಿದ 21 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲ ವರ್ಗದ ಮತದಾರರು ಈ ಭಾರಿ ಜೆಡಿಎಸ್ ಪಕ್ಷದ ಕಡೆ ಒಲವು ತೋರಿದ್ದಾರೆ. ಪುರಸಭೆಯ ಆಡಳಿತದ ಅಧಿಕಾರವು ಜೆಡಿಎಸ್ ತೆಕ್ಕೆಗೆ ಬರುವ ವಿಶ್ವಾಸವಿದೆ ಎಂದರು.
ಕೆ.ಹೆಚ್. ಜಗದೀಶ್, ಉುಮಾಶಂಕರ್, ಅರೇಕಲ್ ಮಂಜುನಾಥ್, ಪಾಂಡುರಂಗರಾವ್, ವಿನಾಯಕ್, ಪಕ್ಷದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.