ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯೋಜನೆಯ ಆಶಯ ಸಾಕಾರ ಗೊಳ್ಳುತ್ತಿದೆ

Lingaraj Badiger
Updated On : 25 Feb 2013, 11:44 am

ನರಸಿಂಹರಾಜಪುರ: ಆದಾಯದಲ್ಲಿ ಸ್ವಲ್ಪ ಭಾಗವನ್ನಾದರೂ ಉಳಿತಾಯ ಮಾಡಬೇಕು ಎಂಬ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯ ಈಗ ಸಾಕಾರ ಗೊಳ್ಳುತ್ತಿದೆ ಎಂದು ಸೀತೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ತಿಳಿಸಿದರು.
ಭಾನುವಾರ ನಾಗರಮಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಧ.ಗ್ರಾ.ಯೋಜನೆಯ ಕುದುರೆಗುಂಡಿ ವಲಯದ ಸೀತೂರು ಕಾರ್ಯಕ್ಷೇತ್ರದ ತಲಮಕ್ಕಿ ಹಾಗೂ ಹಳ್ಳಿಬೈಲು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮಗಳ ಜನರನ್ನು ಉತ್ತಮ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದರು. ಅವರ ಕನಸು ನನಸಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಜನೆಯ ಕೊಪ್ಪ, ಶೃಂಗೇರಿ, ನ.ರಾ.ಪುರ ತಾಲೂಕುಗಳ ಯೋಜನಾಧಿಕಾರಿ ಎ.ಎಸ್. ಸುಕೇಶ್ ಮಾತನಾಡಿ, ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲಿ ಕಳೆದ 6 ವರ್ಷಗಳ ಹಿಂದೆ ಯೋಜನೆ ಪ್ರಾರಂಭವಾಯಿತು. ಈಗ 2,600 ಸ್ವಸಹಾಯ ಸಂಘಗಳಿದ್ದು, 30 ಸಾವಿರ ಸದಸ್ಯರಿದ್ದಾರೆ. 8 ಲಕ್ಷ 6 ಸಾವಿರ ರುಪಾಯಿ ಉಳಿತಾಯವಾಗಿದೆ. 96 ಕೋಟಿ ರುಪಾಯಿ ಪ್ರಗತಿ ನಿಧಿ ನೀಡಿದ್ದೇವೆ. ಸಮುದಾಯ ಸೇವೆಗಾಗಿ 37 ಲಕ್ಷ ರುಪಾಯಿ ಅನುದಾನ ನೀಡಿದ್ದೇವೆ. ಸಂಪೂರ್ಣ ಸುರಕ್ಷಾ ಯೋಜನೆಯಡಿ 95 ಜನರಿಗೆ 2.42 ಲಕ್ಷ ರುಪಾಯಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ನಾಗರಮಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಕೃಷ್ಣಮೂರ್ತಿ ವಹಿಸಿದ್ದರು. ಶ್ರೀಂಕಾಂತ್ ಭಟ್, ಸುರೇಶ್, ರತ್ನಾಕರ, ಈಶ್ವರ, ಶ್ರೀಧರ್ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ವೀಳ್ಯೆ ನೀಡುವ ಮೂಲಕ ಪದಗ್ರಹಣ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement