ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಪಪ್ರಚಾರ ಮಾಡಿ ಮತ ಕೇಳುವುದಿಲ್ಲ

Rashmi Kasaragodu
Updated On : 26 Feb 2013, 11:34 am

ಚಿಕ್ಕಮಗಳೂರು: ನಕಾರಾತ್ಮಕವಾದ ನಡವಳಿಕೆಯಲ್ಲಿ ಅಪಪ್ರಚಾರದ ಮೂಲಕ ಮತ ಕೇಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಮುತ್ತಯ್ಯ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಬರಮಾಡಿಕೊಂಡು ನಂತರ ಅವರು ಮಾತನಾಡಿದರು.
ಕಷ್ಟ- ಸುಖಗಳಿಗೆ ಸ್ಪಂದಿಸಿ: ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷಕ್ಕೆ ದುಡಿದರೆ ನಾಯಕತ್ವದ ಗುಣ ತಾನಾಗಿಯೇ ಬರುತ್ತದೆ. ನಾಯಕತ್ವ ಇದ್ದರೆ ಅಧಿಕಾರ ಅದನ್ನು ಹಿಂಬಾಲಿಸುತ್ತದೆ ಈ ಸಂಬಂಧದಲ್ಲಿ ಸ್ವಾರ್ಥ ಮತ್ತು ದ್ವೇಷದ ರಾಜಕಾರಣ ಬಿಟ್ಟು ಬಡವರ ಕಷ್ಟ, ಸುಖಗಳಿಗೆ ಸ್ಪಂದಿಸಿದರೆ ಜನಸಾಮಾನ್ಯರ ಪ್ರೀತಿಗಳಿಸಿ ಗುರಿ ತಲುಪಲು ಸಾಧ್ಯ ಎಂದರು.
ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನ ತುಲನೆಮಾಡಿ ಮತ ಹಾಕುತ್ತಾರೆಂದರು.
ಆಶ್ರಯ ಸಮಿತಿ ಅಧ್ಯಕ್ಷ ಮುತ್ತಯ್ಯ ಮಾತನಾಡಿ, ನಗರದ ಮೂಲೆ, ಮೂಲೆಯಲ್ಲೂ ಅಭಿವೃದ್ಧಿ ಕಂಡಿದೆ ಎಂದರೆ ಅದರ ಹಿಂದೆ ಸಚಿವರ ಕಾಳಜಿ ಮತ್ತು ಶ್ರಮ ಅಡಗಿದೆ. ಮಾರ್ಕೆಟ್ ರಸ್ತೆ ಸುತ್ತ ಮುತ್ತ ಪ್ರದೇಶದಲ್ಲಿ ಅಭಿವೃದ್ಧಿಯನ್ನು ಕಂಡ ಯುವಕರು ಪಕ್ಷ ಸೇರುತ್ತಿದ್ದಾರೆ ಎಂದರು.
ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಶಂಕರ್, ಕುಮಾರಸ್ವಾಮಿ, ತರಿಕೆರೆ ಅನೂಪ್ ಈ ಸಂದರ್ಭದಲ್ಲಿ ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement