ಅರಿವು ಮೂಡಿಸುವುದು ಸಾಮಾಜಿಕ ಕಾರ್ಯ
ತರೀಕೆರೆ: ಕಾನೂನು ಅರಿವು ಮೂಡಿಸುವುದು ಸಾಮಾಜಿಕ ಕಾರ್ಯವಾಗಿದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎ. ಹಿದಾಯತ್ ಉಲ್ಲಾ ಷರೀಫ್
ತಿಳಿಸಿದ್ದಾರೆ.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ನ್ಯಾಯಾಲಯದ ಅವರಣದಲ್ಲಿ ಪ್ಯಾರಾ ಲೀಗಲ್ ಏಡ್ ವಾಲಿಂಟೇರ್ಸ್‌ಗೆ ಏರ್ಪಡಿಸಿದ್ದ ಕಾನೂನು ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹೊಸ ಕಾಯಿದೆ- ಹಿಂದುಳಿದವರಿಗೆ, ಹರಿಜನ ಗಿರಿಜನರಿಗೆ, ದುರ್ಬಲವರ್ಗದವರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿದೆ, ಶೋಷಣೆ, ದೌರ್ಜನ್ಯ ತಪ್ಪಿಸಲು ಹೊಸ ಕಾಯಿದೆಗಳು ಜಾರಿಗೆ ಬಂದಿದೆ, ಮಹಿಳೆಯರು, ಹರಿಜನ ಮತ್ತು ಗಿರಿಜನರ ಮೇಲೆ ನಿರಂತರವಾಗಿ ದೌರ್ಜನ್ಯ ನೆಡೆಯುತ್ತಲೇ ಇದೆ, ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿದೆ, ಕಾನೂನು ಬಗ್ಗೆ ಅರಿವು ಮೂಡಿಸಬೇಕು ಎಂದರು.
ಧೈರ್ಯವಾಗಿ ಬದುಕಿ: ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಚ್. ಭಾಸ್ಕರ್ ಮಾತನಾಡಿ, ಕಾನೂನು ತಿಳಿದುಕೊಳ್ಳುವುದು ಜೀವನಕ್ಕೆ ಅಗತ್ಯವಾಗಿದೆ, ಧೈರ್ಯವಾಗಿ ಬದುಕಬೇಕು ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಕೀಲರಾದ ಎಂ.ಕೆ. ತೇಜಮೂರ್ತಿ, ಎ.ಆರ್. ಮಹೇಶ್ವರಪ್ಪ, ಕೆ.ಎಲ್. ಲಿಂಗರಾಜು ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು. ವಕೀಲರಾದ ಕೆ.ಆರ್.ರೇವಣಸಿದ್ದಪ್ಪ, ಜಯ್ಯಣ್ಮ, ಎಸ್. ಸುರೇಶ್ ಚಂದ್ರ, ಜಿ. ಚಂದ್ರಶೇಖರ್ ಭಾಗವಹಿಸಿದ್ದರು.