ಆರೋಗ್ಯ ತಪಾಸಣೆ
ನರಸಿಂಹರಾಜಪುರ: ತಾಲೂಕಿನ ಕಮಾಲಾಪುರ ಶಾಲೆಯಲ್ಲಿ ಕೊಪ್ಪ ಎ.ಎಲ್.ಎನ್.ರಾವ್ ಸ್ಮಾರಕ ಆಯುರ್ವೇದ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಘಟಕದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಭಾನುವಾರ ನಡೆಯಿತು. ವಿವಿಧ ರೋಗಗಳ ಬಗ್ಗೆ 50ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ನೀಡಲಾಯಿತು.