ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು ಸಾಹಿತಿಗೆ ಅಭಿನಂದನಾ ಸಮಾರಂಭ

Rashmi Kasaragodu
Updated On : 26 Feb 2013, 11:31 am

ಚಿಕ್ಕಮಗಳೂರು: ಸಾಹಿತಿ ಬೆಳವಾಡಿ ಮಂಜುನಾಥ್ ಅವರಿಗೆ 26ರಂದು ನಗರದ ಎಂಎಲ್‌ಆರ್ ಲಯನ್ಸ್ ಸೇವಾ ಭವನದಲ್ಲಿ ಮಹಾಕಾಳೀ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾಳೀಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದು ಸಂಜೆ 5.30 ಕ್ಕೆ ನಡೆಯುವ ಕಾಳೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಮಾಜ ಸೇವಕ ಡಿ.ಎಚ್. ನಟರಾಜ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ತಜ್ಞ ಡಾ.ಜೆ.ಪಿ. ಕೃಷ್ಣೇಗೌಡ ವಹಿಸಿದರೆ, ಕರ್ನಾಟಕ ಸಂಸ್ಕೃತ ವಿ.ವಿ. ಕುಲವತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಹೇರೂರು ಗ್ರಾಮದ ಶಿವಾನಂದ್ ಭಟ್ ತಂಡದಿಂದ ಗೀತಾ ಗಾಯನ ಮತ್ತು ಗಮಕ ವಾಚನ ನಡೆದರೆ, ಆಶಾಕಿರಣ ಅಂಧಮಕ್ಕಳ ಶಾಲೆ, ಕಲಾ ಸೇವಾ ಸಂಘ ಮತ್ತು ಗಮಕ ಕಲಾ ಪರಿಷತ್, ಕಲ್ಕಟ್ಟೆ ಪುಸ್ತಕದ ಮನೆ, ಕುಂಭಕ ಪ್ರತಿಷ್ಠಾನ, ಸಾಂಸ್ಕೃತಿಕ ಸಂಘ, ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement