ಕಾರು ಪಲ್ಟಿ: ವ್ಯಕ್ತಿಗೆ ಗಾಯ
ನರಸಿಂಹರಾಜಪುರ: ಕುದುರೆಗುಂಡಿ ಸಮೀಪದ ಕಾನೂರು ರಸ್ತೆಯ ಸೇತುವೆ ಬಳಿ ಕಾರೊಂದು ಪಲ್ಟಿ ಹೊಡೆದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಪೆಟ್ಟಾಗಿದ್ದು, ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆದೆ ದಾಖಲಿಸಲಾಗಿದೆ. ಹಾಸನದಿಂದ ತೀರ್ಥಹಳ್ಳಿಗೆ ಸಾಗುತ್ತಿದ್ದ ಕಾರು ಕೊಪ್ಪದಲ್ಲಿ ತೀರ್ಥಹಳ್ಳಿ ರಸ್ತೆಗೆ ಹೋಗುವ ಬದಲು ಕುದುರೆಗುಂಡಿ ಕಡೆಗೆ ಬಂದಿದೆ. ಸೇತುವೆ ಸಮೀಪದ ರಸ್ತೆಯ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಕಾರು ಉರುಳಿ ಬಿದ್ದು ನುಜ್ಜು ಗುಜ್ಜಾಗಿದೆ. ಕಾರಿನಲ್ಲಿ ಒಟ್ಟು 4 ಜನ ಪ್ರಯಾಣಿಕರಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.