ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಾನುವಾರುಗಳ ತಪಾಸಣೆ, ಲಸಿಕೆ

Rashmi Kasaragodu
Updated On : 26 Feb 2013, 11:33 am

ನರಸಿಂಹರಾಜಪುರ: ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎನ್‌ಎಸ್ ಶಿಬಿರದ ಅಂಗವಾಗಿ ತಾಲೂಕಿನ ಪಶು ವೈದ್ಯಕೀಯ ಆಸ್ಪತ್ರೆಯ ಸಹಯೋಗದಲ್ಲಿ ಕಮಾಲಾಪುರ ಗ್ರಾಮದ ಜಾನುವಾರುಗಳಿಗೆ ಸೋಮವಾರ ಉಚಿತವಾಗಿ ತಪಾಸಣೆ ನಡೆಸಿ ಕಾಲು ಬಾಯಿ ಜ್ವರದ ಲಸಿಕೆ ನೀಡಲಾಯಿತು.
ಕಟ್ಟಿನಮನೆ ಪಶು ವೈದ್ಯ ಆಸ್ಪತ್ರೆಯ ವೈದ್ಯರಾದ ಡಾ. ರಾಕೇಶ್, ಡಾ. ರೇವಣಪ್ಪ, ಡಾ. ಓಬಳಪ್ಪ ಹಾಗೂ ಇತರೆ ಸಿಬ್ಬಂದಿ ಲಸಿಕೆ ನೀಡಿದರು. ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಎಸ್.ಎ.ನರಸಿಂಹ, ಡಾ.ಟಿ. ಪ್ರಸನ್ನ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement