ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯಲ್ಲಿ 66 ನಾಮಪತ್ರ ತಿರಸ್ಕೃತ

Rashmi Kasaragodu
Updated On : 26 Feb 2013, 11:34 am

ಚಿಕ್ಕಮಗಳೂರು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಕೆಯಾಗಿದ್ದ 1022 ನಾಮಪತ್ರಗಳಲ್ಲಿ 66 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸ್ವೀಕೃತಗೊಂಡ ಸ್ಥಳೀಯ ಸಂಸ್ಥೆಗಳ ನಾಮಪತ್ರ ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ವಿವರ ಈ ಕೆಳಕಂಡಂತೆ ಇದೆ.
ತರೀಕೆರೆ ಪುರಸಭೆ: ಸ್ವೀಕೃತಗೊಂಡ ನಾಮಪತ್ರಗಳಲ್ಲಿ 23 ತಿರಸ್ಕೃತ, ಕಡೂರು- 152ರಲ್ಲಿ 12 ತಿರಸ್ಕೃತ, ಬೀರೂರು- 119ರಲ್ಲಿ 2, ಎನ್.ಆರ್.ಪುರ- 54 ರಲ್ಲಿ 3 ತಿರಸ್ಕೃತ, ಮೂಡಿಗೆರೆ- 77ರಲ್ಲಿ 2, ಕೊಪ್ಪ- 42ರಲ್ಲಿ 1, ಚಿಕ್ಕಮಗಳೂರು- 277ರಲ್ಲಿ 23 ನಾಮಪತ್ರಗಳು ತಿರಸ್ಕೃತಗೊಂಡಿವೆ. ಶೃಂಗೇರಿ ಪಟ್ಟಣ ಪಂಚಾಯ್ತಿಗೆ ಸ್ವೀಕೃತಗೊಂಡ 37 ನಾಮಪತ್ರಗಳು ಸಿಂಧುವಾಗಿವೆ. ನಾಮಪತ್ರಗಳ ಹಿಂಪಡೆಯಲು ಫೆ.27 ಕೊನೆಯ ದಿನವಾಗಿರುತ್ತದೆ.
ತರೀಕೆರೆ: 7 ತಿರಸ್ಕೃತ
ತರೀಕೆರೆ: ಪುರಸಭೆ ಚುನಾವಣೆಗಾಗಿ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಸೋಮವಾರ ನೆಡೆದು 7 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಮತ್ತು ಶ್ರೀಧರ್ ತಿಳಿಸಿದ್ದಾರೆ.
ನ.ರಾ. ಪುರ: 3 ತಿರಸ್ಕೃತ
ನರಸಿಂಹರಾಜಪುರ: ಪಪಂ ಚುನಾವಣೆಯ ಅಭ್ಯರ್ಥಿಗಳ ನಾಮ ಪತ್ರ ಪರಿಶೀಲನೆ ಸೋಮವಾರ ನಡೆದು 3 ಅಭ್ಯರ್ಥಿಗಳ ನಾಮ ಪತ್ರ ತಿರಸ್ಕೃತಗೊಂಡಿದೆ.
 1 ನೇ ವಾರ್ಡಿನ ರೇಖಾ (ಬಿಜೆಪಿ) 3 ನೇ ವಾರ್ಡಿನ ಎಚ್.ವೈ. ಮಂಜುನಾಥ್‌ಥ್(ಬಿಜೆಪಿ) ಹಾಗೂ 9 ನೇ ವಾರ್ಡಿನ ಅಬೀಬುಲ್ಲಾ (ಕಾಂಗ್ರೆಸ್) ಅವರ ನಾಮ ಪತ್ರ ತಿರಸ್ಕೃತಗೊಂಡಿದೆ. ನಾಮಪತ್ರದ ಜೊತೆ ಬಿ.ಪಾರಂ ನೀಡದೆ ಇರುವುದೇ ನಾಮ ಪತ್ರ ತಿರಸ್ಕೃತವಾಗಲು ಕಾರಣವಾಗಿದೆ. 39 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ದವಾಗಿದೆ ಎಂದು ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮನವರ್ ತಿಳಿಸಿದ್ದಾರೆ.
ಮೂಡಿಗೆರೆ: 2 ತಿರಸ್ಕೃತ
ಮೂಡಿಗೆರೆ: ಪಪಂ ಚುನಾವಣೆಗೆ ನಾಮ ಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ನಾಮ ಪತ್ರ ಪರಿಶೀಲನೆ ಸೋಮವಾರ ಪಪಂ ಕಚೇರಿಯಲ್ಲಿ ನಡೆಯಿತು.
ಪಪಂ 11 ವಾರ್ಡ್‌ಗಳಿಗೆ 63 ಅಭ್ಯರ್ಥಿಗಳ 76 ನಾಮ ಪತ್ರಗಳು ಸಲ್ಲಿಕೆಯಾಗಿದ್ದು. ಇಂದು ಪರಿಶಿಲನಾ ವೇಳೆ ಎರಡು ನಾಮ ಪತ್ರ ತಿರಸ್ಕೃತ ಗೊಂಡಿವೆ. 10 ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಜೆಡಿಎಸ್‌ನ ಇಲೀಯಾಜ್ ಹುಸೇನ್ ಮತ್ತು 11 ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಚಂದ್ರೇಗೌಡರ ನಾಮ ಪತ್ರಗಳು ತಿರಸ್ಕೃತಗೊಂಡಿದ್ದು. ಬಿ.ಫಾರಂ ಹಾಗೂ ಸೂಚಕರ ಕೊರತೆಯಿಂದ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಕೊಪ್ಪ: 2 ತಿರಸ್ಕೃತ
ಕೊಪ್ಪ: ಇಲ್ಲಿನ ಪಪಂ ಚುನಾವಣೆಯಲ್ಲಿ ಒಟ್ಟು 42 ನಾಮಪತ್ರ ಸಲ್ಲಿಕೆಯಾಗಿದ್ದು, ಸೋಮವಾರ ನಡೆದ ಪರಿಶೀಲನೆಯಲ್ಲಿ 2 ಎರಡು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಮಂಜುನಾಥ ತಿಳಿಸಿದ್ದಾರೆ.
ಪಪಂನ 11 ಸ್ಥಾನಗಳಿಗೆ ನಡೆಯುವ ಚುನವಾಣೆಗೆ ಈ ಬಾರಿ ಬಹುತೇಕ ರಾಜಕೀಯ ಪಕ್ಷ ಬೆಂಬಲಿತ ಅಭ್ಯರ್ಥಿಗಳೇ ಕಣಕ್ಕಿದಿದ್ದು. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ 11 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ಜೆಡಿಎಸ್ 10 ಸ್ಥಾನಗಳಿಗೆ ಸ್ಪರ್ಧೆಯೊಡ್ಡಿದೆ.  ಬಿಎಸ್‌ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಸ್ಪರ್ಧಾ ಕಣಕ್ಕೆ ಇಳಿದಿದೆ. ಕೆಜೆಪಿ ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಯಿತಾದರೂ ಸಮಯ ಮೀರಿದ್ದರಿಂದ ಚುನಾವಣಾಧಿಕಾರಿ ಮಂಜುನಾಥ್ ನಾಮಪತ್ರ ಸ್ವೀಕರಿಸಲು ನಿರಾಕರಿಸಿದ್ದು, ಕೆಲ ಸಮಯ ಗೊಂದಲಕ್ಕೆ ಕಾರಣವಾಯಿತು.
ಉಪ ಚುನಾವಣಾಧಿಕಾರಿಯಾಗಿ ಗಣೇಶ್, ಲೆಕ್ಕಾಧಿಕಾರಿಯಾಗಿ ಕಲಶೇಶ್ವರ ನಾಮಪತ್ರ ಸ್ವೀಕಾರ ಕರ್ತವ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement