ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗ್ರಾಮಲೆಕ್ಕಿಗ ಲೋಕಾಯುಕ್ತ ಬಲೆಗೆ

Lingaraj Badiger
Updated On : 27 Feb 2013, 11:05 am

ಚಿಕ್ಕಮಗಳೂರು: ಜಮೀನು ಖಾತೆ ಬದಲಾವಣೆಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗ ಲೋಕಾಯುಕ್ತರಿಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.
ಕಡೂರು ತಾಲೂಕು ಹಿರೇನಲ್ಲೂರು ಹೋಬಳಿಯ ಬಾಸೂರು ಗ್ರಾಮದ ಮೋಹನ್ ಕುಮಾರ್ ಎಂಬುವವರು ಗ್ರಾಮದಲ್ಲಿರುವ ತನ್ನ ತಂದೆಯ ಜಮೀನಿನ ಪೈಕಿ 2.35 ಎಕ್ರೆ ಜಮೀನನ್ನು ತನ್ನ ಹೆಸರಿಗೆ ಖಾತೆ ಬದಲಾವಣೆಗೆ ಶಿಫಾರಸ್ಸು ಮಾಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಗ್ರಾಮಲೆಕ್ಕಿಗ ರಾಜು 3 ಸಾವಿರ ಲಂಚಕ್ಕೆ ಒತ್ತಾಯಿಸಿ, ಮುಂಗಡವಾಗಿ 1200 ಪಡೆದುಕೊಂಡಿದ್ದರು. ನಂತರ ಖಾತೆ ಬದಲಾವಣೆಗೆ ಶಿಫಾರಸ್ಸು ಮಾಡಿ, ಇನ್ನುಳಿದ 1800 ಹಣಕ್ಕೆ ಒತ್ತಾಯಿಸುತ್ತಿದ್ದರು.
ಮೋಹನ್‌ಕುಮಾರ್ ಅವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿದಾಗ 1800 ಲಂಚ ಪಡೆಯುತ್ತಿದ್ದಾಗ ರಾಜು ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.
ಮಹಿಳೆ ಆತ್ಮಹತ್ಯೆ
ನರಸಿಂಹರಾಜಪುರ: ಜೋಗಿ ಮಕ್ಕಿಯ ಜಯ (52) ಎಂಬವರು ತಮ್ಮ ಮನೆಯ ಪಕ್ಕದ ಹುಣಿಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
 ಜಯ ಅವರಿಗೆ 2 ಎಕ್ರೆ ಜಮೀನಿದ್ದು ನೀರಿನ ಕೊರತೆ ಇರುತ್ತಿತ್ತು. ನೀರು ಬಿಡುವ ಸಂಬಂಧ ಪಕ್ಕದ ರೈತರೊಂದಿಗೆ ಜಗಳ ನ್ಯಾಯಾಲಯದಲ್ಲಿತ್ತು ಎನ್ನಲಾಗಿದೆ. ನ್ಯಾಯಾಲಯದಲ್ಲಿ ವಿರುದ್ಧ ತೀರ್ಪು ಬರುತ್ತದೆ ಎಂದು ಮನನೊಂದು ಜಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಂದಿದೆ. ಮೃತ ಮಹಿಳೆಗೆ ಗಂಡ, ಮೂವರು ಮಕ್ಕಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement