ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪದಾಧಿಕಾರಿಗಳ ನೇಮಕ

Lingaraj Badiger
Updated On : 27 Feb 2013, 10:57 am

ನರಸಿಂಜರಾಜಪುರ: ಜೆಡಿಎಸ್‌ದಿಂದ ಪಟ್ಟಣ ಪಂಚಾಯ್ತಿ ಚುನಾವಣೆಯ ಎಲ್ಲಾ 11 ವಾರ್ಡುಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಂಗಳವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಟಿ. ರಾಜೇಂದ್ರ, ಬಿಜೆಪಿಯ ದುರಾಡಳಿತದಿಂದ ಬೇಸತ್ತ ಮುಖಂಡರು ಜೆಡಿಎಸ್ ಕಡೆಗೆ ಬರುತ್ತಿದ್ದಾರೆ. ಪಟ್ಟಣದ 1ನೇ ವಾರ್ಡಿನ ವ್ಯಾಪ್ತಿಯ ಬಿಜೆಪಿ ಮುಖಂಡ ವೈ.ಎಸ್. ರವಿ, 4ನೇ ವಾರ್ಡಿನ ವ್ಯಾಪ್ತಿಯ ಮಲ್ಲೇಶ್ ಜೆಡಿಎಸ್ ಸೇರಿದ್ದಾರೆ ಎಂದರು.
ಪದಾಧಿಕಾರಿಗಳ ನೇಮಕ: ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ತಲಕಾನೆ ರಾಜೇಂದ್ರ ಅವರನ್ನು ಶೃಂಗೇರಿ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಸಬಾ ಹೋಬಳಿ ಅಧ್ಯಕ್ಷರನ್ನಾಗಿ ರಾಘವೇಂದ್ರ, ತಾಲೂಕು ಜೆಡಿಎಸ್ ವಕ್ತಾರರನ್ನಾಗಿ ವರ್ಕಾಟೆ ಸುಧಾಕರ್, ತಾಲೂಕು ಎಸ್.ಸಿ,ಎಸ್.ಟಿ. ವಿಭಾಗದ ಅಧ್ಯಕ್ಷರನ್ನಾಗಿ ಕೊರಳಕೊಪ್ಪ  ಶಿವಕುಮಾರ್, ನಗರ ಘಟಕದ ಎಸ್.ಸಿ ಎಸ್.ಟಿ ವಿಭಾಗದ ಅಧ್ಯಕ್ಷರನ್ನಾಗಿ ಹರೀಶ್ ಅವರನ್ನು ನೇಮಿಸಲಾಗಿದೆ ಎಂದು ಎಚ್.ಟಿ. ರಾಜೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement