ರೇಲ್ವೆ ಬಜೆಟ್ 2013: ಜನ ಏನಂತಾರೆ?
ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲ್ವೆಯ ನೂತನ ಮಾರ್ಗಕ್ಕೆ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಇದಕ್ಕೆ 10 ಕೋಟಿ ಸಾಕಾಗುವುದಿಲ್ಲ. ಹೆಚ್ಚು ಹಣ ಕೊಡಬೇಕು.
- ಪಿ. ಜಯರಾಮು.
ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲ್ವೆ ಸಂಪರ್ಕ ಹಲವು ವರ್ಷದ ಕನಸು, ಇದು, ನನಸಾಗಬೇಕು. ಈ ವರ್ಷದಲ್ಲಿ ಈ ಕಾಮಗಾರಿಯನ್ನು ತೆಗೆದುಕೊಂಡು ತ್ವರಿತಗತಿಯಲ್ಲಿ ಮುಗಿಸಬೇಕು
- ಸಿ.ಟಿ. ಲೋಕೇಶ್
ಜಿಲ್ಲೆಯ ಜನರಿಗೆ ಖುಷಿಯಾಗಿದೆ. ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಮುಕ್ತಾಯಗೊಂಡ ನಂತರ ಇಲ್ಲಿಗೆ ಹೆಚ್ಚು ರೈಲು ಬಿಡಬೇಕು. ಈ ಬಜೆಟ್ನಲ್ಲಿಯೇ ಇದು ಘೋಷಣೆ ಮಾಡಬೇಕಾಗಿತ್ತು
- ಬಿ.ಆರ್. ಸೋಮಶೇಖರ್.
ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಒಳ್ಳೆಯ ಬಜೆಟ್. ಕಡೂರಿನಿಂದ ಚಿಕ್ಕಮಗಳೂರಿಗೆ ರೈಲು ಬಂದರೆ ಪ್ರಯೋಜನವಿಲ್ಲ. ಬೇಲೂರು- ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ
- ಎಸ್. ನಾಗರಾಜ್.
ಚಿಕ್ಕಮಗಳೂರು- ಬೇಲೂರು- ಸಕಲೇಶಪುರಕ್ಕೆ ಹೊಸ ರೈಲ್ವೆ ಮಾರ್ಗ ನೀಡಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಇದು, ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು. ಆಗ ಅನುಕೂಲವಾಗಲಿದೆ.
- ಆರ್. ರೇಣುಕಾರಾಧ್ಯ
ಚಿಕ್ಕಮಗಳೂರಿಗೆ ರೈಲು ಬರುವುದು ಕನಸ್ಸಿನ ಮಾತಾಗಿತ್ತು. ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದಷ್ಟು ಬೇಗ ಕಡೂರು- ಚಿಕ್ಕಮಗಳೂರು ಮಾರ್ಗ ಉದ್ಘಾಟನೆಯಾಗಲಿ.
- ಆರ್. ಶೀಲಾ.
ಹೊಸ ಮಾರ್ಗಕ್ಕೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಚಿಕ್ಕಮಗಳೂರಿಗೆ ರೈಲು ಬರುವುದರಿಂದ ತುಂಬಾ ಅನುಕೂಲವಾಗಲಿದೆ. ಕಡೂರು- ಚಿಕ್ಕಮಗಳೂರು ಕಾಮಗಾರಿ ಬೇಗ ಮುಗಿಸಬೇಕು
- ಬಿ. ರೇವನಾಥ್
ಚಿಕ್ಕಮಗಳೂರಿಗೆ ರೈಲು ಬರುತ್ತಿದೆ ಎಂಬುದು ನಾವು ಚಿಕ್ಕವರಾಗಿದ್ದಾಗ ಕೇಳಿದ್ದೇವು. ಆದರೆ, ಈವರೆಗೆ ರೈಲು ಬಂದಿಲ್ಲ. ಮುಂದೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಹೊಸ ಮಾರ್ಗ ಆರಂಭವಾಗುತ್ತದೆಯೋ ಇಲ್ಲವೋ ಅನುಮಾನ.
- ಎಚ್.ಎಸ್. ನಂದನ್ಕುಮಾರ್.
ಕಡೂರು- ಚಿಕ್ಕಮಗಳೂರು ರೈಲ್ವೆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಬೇಗ ಆಗಲಿಲ್ಲ. ಮುಂದಿನ ಬಜೆಟ್ ಒಳಗೆ ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ಹೊಸ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
- ತಸ್ರೀಪ್