ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

Lingaraj Badiger
Updated On : 27 Feb 2013, 10:57 am

ನರಸಿಂಹರಾಜಪುರ: ಮಾರ್ಚ್ 16 ಹಾಗೂ 17 ರಂದು ನಡೆಯುವ 6 ನೇ ತಾಲೂಕು ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಅಗ್ರಹಾರದ ಸಾಹಿತಿ, ಅತ್ತಿಮಬ್ಬೆ ಪ್ರಶಸ್ತಿ ವಿಜೇತೆ ಎಂ. ಜಯಮ್ಮ ಆಯ್ಕೆಯಾಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ, ಮಂಗಳವಾರ ಸಮ್ಮೇಳಾಧ್ಯಕ್ಷರಿಗೆ ವೀಳ್ಯ ನೀಡಿ ಆಹ್ವಾನಿಸಲಾಗಿದ್ದು, ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಮಹಿಳೆಯೊಬ್ಬರು ಸಮ್ಮೇಳಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಲಿಮ್ಕಾ ದಾಖಲೆ:ಎಂ. ಜಯಮ್ಮ ಕಾದಂಬರಿ, ಸಣ್ಣ ಕಥೆ, ನಾಟಕ ರಚಿಸಿದ್ದಾರೆ. ಹಲವು ಲೇಖನ ಬರೆದಿದ್ದಾರೆ. ದೂರದರ್ಶನ ಕಾರ್ಯಕ್ರಮದಲ್ಲಿ ಲಿಮ್ಕಾ ದಾಖಲೆಯಲ್ಲಿ ಸೇರಿದ್ದಾರೆ. ಎಂ. ಜಯಮ್ಮ ಅವರು ಬಹುಮುಖ ಪ್ರತಿಭಾವಂತರಾಗಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮೇಳನಕ್ಕಾಗಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದೆ. ಸಚಿವ ಡಿ.ಎನ್. ಜೀವರಾಜ್ ಸ್ವಾಗತ  ಸಮಿತಿ ಗೌರವಾಧ್ಯಕ್ಷರಾಗಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಟಿ. ವೆಂಕಟೇಶ್ ಆಯ್ಕೆಯಾಗಿದ್ದಾರೆ ಎಂದರು.
9 ಉಪ ಸಮಿತಿ: ಸ್ವಾಗತ ಸಮಿತಿ ಅಲ್ಲದೆ 9 ಉಪ ಸಮಿತಿಗಳನ್ನು ರಚಿಸಲಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪುರುಶೋತ್ತಮ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಅಭಿನವ ಗಿರಿರಾಜ್, ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ರಾಜೇಂದ್ರ,ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮದ ಸಮಿತಿ ಅಧ್ಯಕ್ಷರಾಗಿ ನವೋದಯ ಮಂಜುನಾಥ್, ವಸತಿ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ, ನೋಂದಣಿ ಮತ್ತು ವಿಚಾರಣಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಹಾಗೂ ಮಂಜುನಾಥ್, ಆಹಾರ ಸಮಿತಿ ಅಧ್ಯಕ್ಷರಾಗಿ ಹಿರಿಯಣ್ಣ, ನಾಗರಾಜ್ ಆಯ್ಕೆಯಾಗಿದ್ದಾರೆ ಎಂದರು.
5 ಗೋಷ್ಠಿಗಳು: 2 ದಿನ ನಡೆಯುವ 6 ನೇ ಸಾಹಿತ್ಯ ಸಮ್ಮೇಳನದಲ್ಲಿ 5 ಗೋಷ್ಠಿಗಳು ನಡೆಯಲಿದೆ. ವಾಟರ್ ಟ್ಯಾಂಕ್ ಸಮೀಪದ ರಂಗಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ 150 ಪುಟಗಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಸ್ಮರಣ ಸಂಚಿಕೆಗೆ ಉತ್ತಮ ಶೀರ್ಷಿಕೆಯನ್ನು ಮಾರ್ಚ್ 5 ರ ಒಳಗೆ ನೀಡಿದವರಿಗೆ ಸಮ್ಮೇಳನದಲ್ಲಿ ಗುರುತಿಸಲಾಗುವುದು. ಸ್ಮರಣ ಸಂಚಿಕೆಗೆ ಮಾರ್ಚ 5 ರ ಒಳಗೆ ಲೇಖನವನ್ನು ಸಹ ಕಳಿಸಬಹುದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಕ.ಸಾ.ಪ. ಹೋಬಳಿ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ, ರಾ. ವೆಂಕಟೇಶ್, ನಿಕಟಪೂರ್ವ ಅಧ್ಯಕ್ಷ ಪಿ.ಕೆ. ಬಸವರಾಜ್, ತಾಲೂಕು ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ಭಾಗ್ಯನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement