ಇಂದು ರಥೋತ್ಸವ
ಶೃಂಗೇರಿ: ಇಲ್ಲಿನ ಶ್ರೀ ಮಠದ ಅಧಿದೇವತೆ ಶ್ರೀ ಶಾರದಾಂಬೆಯ ಮಹಾರಥೋತ್ಸವ ಫೆ.28ರಂದು ವೈಭವಯುತವಾಗಿ ನಡೆಯಲಿದೆ.
ರಥೋತ್ಸವಾಂಗ ಭಾನುವಾರದಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಗುರುವಾರ ಪಟ್ಟಣದಲ್ಲಿ ಶ್ರೀ ಶಾರದಾಂಬೆಯ ವಿಗ್ರಹದೊಂದಿಗೆ ಮಹಾರಥೋತ್ಸವ ಜರುಗಲಿದೆ. ಶುಕ್ರವಾರ ಅವಭೃತ, ತುಂಗಾ ನದಿಯಲ್ಲಿ ತಪ್ಪೋತ್ಸವ, ಸಂಜೆ ಬೀದಿ ಉತ್ಸವ ನಡೆಯಲಿದೆ.