ಕಣದಲ್ಲಿ 674 ಅಭ್ಯರ್ಥಿಗಳು
ಚಿಕ್ಕಮಗಳೂರು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ 148 ವಾರ್ಡ್‌ಗಳಿಗೆ ಬರುವ ಮಾರ್ಚ್ 7 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿ ಅಂತಿಮವಾಗಿ 674 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಚಿಕ್ಕಮಗಳೂರು ನಗರಸಭೆಯ 35 ವಾರ್ಡ್‌ಗಳಿಗೆ 198, ಕಡೂರು ಪುರಸಭೆಯ 23 ಸ್ಥಾನಗಳಿಗೆ 107, ಬೀರೂರಿನ 23 ವಾರ್ಡ್‌ಗಳಿಗೆ 86, ತರೀಕೆರೆಯ 23 ವಾರ್ಡ್‌ಗಳಿಗೆ 119 ಮಂದಿ ಸ್ಪರ್ಧೆ ಮಾಡಿದ್ದಾರೆ.
ಮೂಡಿಗೆರೆ ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳಿಗೆ 56, ಎನ್.ಆರ್.ಪುರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಿಗೆ 38, ಕೊಪ್ಪ ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳಿಗೆ 39, ಶೃಂಗೇರಿ ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳಿಗೆ 31 ಮಂದಿ ಸ್ಪರ್ಧೆ ಮಾಡಿದ್ದಾರೆ.
66 ನಾಮಪತ್ರ ತಿರಸ್ಕೃ: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ 1022 ನಾಮಪತ್ರಗಳು ಬಂದಿದ್ದು, ಈ ಪೈಕಿ 66 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಇದೀಗ ಚುನಾವಣಾ ಕಣದಲ್ಲಿ 674 ಮಂದಿ ಉಳಿದುಕೊಂಡಿದ್ದಾರೆ.
ಮತದಾರರ ವಿವರ: ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 149162 ಮತದಾರರು ಇದ್ದು, ಈ ಪೈಕಿ 75026 ಪುರುಷರು, 74136 ಮಹಿಳಾ ಮತದಾರರು ಇದ್ದಾರೆ.
ಇವುಗಳಲ್ಲಿ ಚಿಕ್ಕಮಗಳೂರು ನಗರಸಭೆಯಲ್ಲಿ 74278, ಕಡೂರು- 20801, ಬೀರೂರು- 14745, ತರೀಕೆರೆ- 22687, ಎನ್.ಆರ್.ಪುರ- 4511, ಕೊಪ್ಪ- 2981, ಶೃಂಗೇರಿ- 2838, ಮೂಡಿಗೆರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 6321 ಮತದಾರರು ಇದ್ದಾರೆ.
80 ಅತಿ ಸೂಕ್ಷ್ಮ ಮತಗಟ್ಟೆ: ಜಿಲ್ಲೆಯ 148 ವಾರ್ಡ್‌ಗಳಲ್ಲಿ 231 ಮತಗಟ್ಟೆ ಕೇಂದ್ರಗಳಲ್ಲಿ ಈ ಪೈಕಿ 80 ಅತಿ ಸೂಕ್ಷ್ಮ, 116 ಸೂಕ್ಷ್ಮ ಹಾಗೂ 35 ಸಾಮಾನ್ಯ ಮತಗಟ್ಟೆಗಳಿವೆ.
ಚಿಕ್ಕಮಗಳೂರು ನಗರಸಭೆಯ 109 ಬೂತ್‌ಗಳಲ್ಲಿ 21 ಅತಿ ಸೂಕ್ಷ್ಮ, 56 ಸೂಕ್ಷ್ಮ, 32 ಸಾಮಾನ್ಯ ಮತಗಟ್ಟೆಗಳಿವೆ. ಕಡೂರಿನ 23 ವಾರ್ಡ್‌ಗಳಲ್ಲಿ 32 ಮತಗಟ್ಟೆಗಳಿದ್ದು, ಈ ಪೈಕಿ 11 ಅತಿಸೂಕ್ಷ್ಮ, 11 ಸೂಕ್ಷ್ಮ, 1 ಸಾಮಾನ್ಯ, ಬೀರೂರು ಪುರಸಭೆಯ 23 ವಾರ್ಡ್‌ಗಳಲ್ಲಿ 23 ಮತಗಟ್ಟೆಗಳಿದ್ದು, ಇವುಗಳಲ್ಲಿ 11 ಅತಿ ಸೂಕ್ಷ್ಮ, 11 ಸೂಕ್ಷ್ಮ, 1 ಸಾಮಾನ್ಯ. ತರೀಕೆರೆಯ 23 ವಾರ್ಡ್‌ಗಳಲ್ಲಿ 23 ಮತಗಟ್ಟೆ ಕೇಂದ್ರಗಳಿದ್ದು, ಈ ಪೈಕಿ 15 ಅತಿ ಸೂಕ್ಷ್ಮ, 17 ಸೂಕ್ಷ್ಮ, 1 ಸಾಮಾನ್ಯ.
ಮೂಡಿಗೆರೆಯ 11 ವಾರ್ಡ್‌ಗಳಲ್ಲಿ 11 ಮತಗಟ್ಟೆ ಕೇಂದ್ರಗಳಲ್ಲಿ ಇವುಗಳಲ್ಲಿ 7 ಅತಿ ಸೂಕ್ಷ್ಮ, 4 ಸೂಕ್ಷ್ಮ, ಎನ್.ಆರ್. ಪುರ ಪಟ್ಟಣ ಪಂಚಾಯ್ತಿಯಲ್ಲಿ ಒಟ್ಟು 11 ವಾರ್ಡ್‌ಗಳಿದ್ದು, ಇಲ್ಲಿನ 11 ಬೂತ್‌ಗಳಲ್ಗಿ 5 ಅತಿ ಸೂಕ್ಷ್ಮ, 6 ಸೂಕ್ಷ್ಮ, ಕೊಪ್ಪದ 11 ಮತಗಟ್ಟೆಗಳಲ್ಲಿ 4 ಅತಿ ಸೂಕ್ಷ್ಮ, 7 ಸೂಕ್ಷ್ಮ, ಶೃಂಗೇರಿ ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳ 11 ಬೂತ್‌ಗಳಲ್ಲಿ 6 ಅತಿ ಸೂಕ್ಷ್ಮ, ಹಾಗೂ 5 ಸೂಕ್ಷ್ಮ ಮತಗಟ್ಟೆಗಳಿವೆ.
ನಾಮಪತ್ರಗಳ ಪರಿಶೀಲನೆಯ ಮರು ದಿನದಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಉಮೇದುವಾರಿಕೆ ಹಿಂಪಡೆಯುವ ದಿನ ಮುಗಿದ್ದು, ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸ್ಪಷ್ಟವಾದ ಚಿತ್ರಣ ಬುಧವಾರ ಸಂಜೆಯ ವೇಳೆಗೆ ಹೊರ ಬಂದಿದ್ದು, ಗುರುವಾರದಿಂದ ಪ್ರಚಾರ ಕಾವೇರಲಿದೆ.