ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾವೈಕ್ಯತೆ ಬೆಸೆಯುವ ಸಂಘಟನೆ ಅಗತ್ಯ

Lingaraj Badiger
Updated On : 28 Feb 2013, 10:53 am

ಸಖರಾಯಪಟ್ಟಣ: ದೇಶಾದ್ಯಂತ ನಡೆಯುತ್ತಿರುವ ಜಾತಿ ಸಂಘರ್ಷ, ಪ್ರಾದೇಶಿಕ ವಿಭಜನೆ ಮತ್ತು ಭಾಷಾ ತಾರತಮ್ಯಗಳನ್ನು ಯುವ ಜನತೆ ಮೆಟ್ಟಿ ನಿಲ್ಲಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎ.ಎನ್. ಮಹೇಶ್ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಾರಂಭಿಸಿರುವ ರೋವರ್ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶ ಪ್ರೇಮವನ್ನು ಭಾವೈಕ್ಯತೆಯನ್ನು ಬೆಸೆಯುವ ಸಂಘನೆಗಳ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಯುವ ಸಂಘಟನೆಯಾಗಿ ಪ್ರಪಂಚದಾದ್ಯಂತ ತನ್ನ ಘಟಕಗಳನ್ನು ವಿಸ್ತರಿಸಿದ್ದು, ಸಾಮಾಜಿಕ ಚಳುವಳಿಯಾಗಿ ರೂಪುಗೊಂಡಿದೆ ಎಂದರು.
ಇಂದು 28 ದಶಲಕ್ಷ ಜನರಿದ್ದಾರೆ: ಹಿರಿಯ ಸ್ಕೌಟರ್ ನೀಲಕಂಠಾಚಾರ್ ಮಾತನಾಡಿ, 19ನೇ ಶತಮಾನದಲ್ಲಿ ಪ್ರಪಂಚದಲ್ಲಿ ಆದಂತಹ ವಿದ್ಯಮಾನಗಳನ್ನು ಗಮನಿಸಿ ಅಂದು ಇಂಗ್ಲೆಂಡ್ ದೇಶದಲ್ಲಿ ಅರಾಜಕತೆ ಪ್ರಾರಂಭವಾದಾಗ ಅಲ್ಲಿಯ ಮಾಜಿ ಸೇನಾನಿ ಲಾರ್ಡ್ ಬೇಡನ್ ಪೊವೆಲ್ ಪತ್ರಿಕೆಯ ಮೂಲಕ ಯುವಕರಿಗೆ ಕರೆ ನೀಡಿ, ಆ ಕರೆಗೆ ಓಗೊಟ್ಟು 20 ಜನ ಯುವಕರು ಭಾಗವಹಿಸಿದ್ದರು.  ಆಗ ಆರಂಭವಾದ ಈ ಚಳವಳಿ ಇಂದು 28 ದಶಲಕ್ಷ ಜನರನ್ನು ಹೊಂದಿ ಪ್ರಪಂಚದ 216 ದೇಶಗಳಲ್ಲಿ ವಿಸ್ತರಿಸಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಆರ್. ವೈದ್ಯ, ಕೇವಲ ಸಮವಸ್ತ್ರವನ್ನು ಧರಿಸಿದವರಲ್ಲದೆ ಎಲ್ಲರೂ ಸ್ಕೌಟ್ಸ್ ಸಿದ್ದಾಂತವನ್ನು ಪಾಲಿಸಬಹುದಾಗಿದ್ದು, ಈ ದೇಶವನ್ನು ರಕ್ಷಿಸಬೇಕು ಈ ದೇಶದ ಘನತೆ ಗೌರವವನ್ನು ಕಾಪಾಡಬೇಕು ಹಾಗೂ ಈ ದೇಶದ ನೆಲ, ಜಲ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ ಅವರು ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಜಿಲ್ಲಾ ಸಹಾಯಕ ಆಯುಕ್ತೆ ಭಾರತಿ ಶಿವರುದ್ರಪ್ಪ ಮಾತನಾಡಿದರು, ಜಿಲ್ಲಾ ಸಂಘಟಕ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಜಿ. ತಿಮ್ಮರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement