ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಕ್ತಿ ಗಣಪತಿ ವಾರ್ಷಿಕೋತ್ಸವ

Lingaraj Badiger
Updated On : 28 Feb 2013, 10:55 am

ಚಿಕ್ಕಮಗಳೂರು: ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ದೇವಾಲಯಗಳು ಸಹಕಾರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಹೇಳಿದ್ದಾರೆ.
ನಗರದ ಉಪ್ಪಳ್ಳಿ ಬಡಾವಣೆಯ ಶ್ರೀ ಮಹಾಲಕ್ಷ್ಮೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಬುಧವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಆಧುನಿಕತೆಯ ಬದುಕಿನಲ್ಲಿಂದು ಸದಾ ಒತ್ತಡದ ನಡುವೆ ಬಾಳುತ್ತಿರುವ ಪರಿಣಾಮ ಮನುಷ್ಯ ತನ್ನ ಸಹಜ ಸಿದ್ಧವಾದ ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ ಎಂದರು. ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ಚಂಡಿಕಾ ಹೋಮ, ದುರ್ಗಾ ನಮಸ್ಕಾರ, ವಿಶೇಷ ಪೂಜೆ ಜರುಗಿದವು. ಮಾಜಿ ಶಾಸಕ ಧರ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವ ಜನತಾದಳದ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್, ನಗರಸಭೆ ಮಾಜಿ ಸದಸ್ಯ ಬಿ.ಹೆಚ್. ನೂರ್ ಅಹ್ಮದ್, ರಾಜಶೇಖರ್ ಹಾಗೂ ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement