ಶೇ. 90 ಮಕ್ಕಳಿಗೆ ಪಲ್ಸ್ ಪೊಲಿಯೋ
ಚಿಕ್ಕಮಗಳೂರು: ಭಾನುವಾರ ನಡೆದ 5 ವರ್ಷದವರೆಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ಹಾಕುವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 95,598 ಮಕ್ಕಳಿಗೆ ಹನಿ ಹಾಕುವ ಮೂಲಕ ಶೇ. 90.01 ರಷ್ಟು ಸಾಧನೆ ಮಾಡಲಾಗಿದೆ.
ತಾಲೂಕುವಾರು ವಿವರ ಈ ರೀತಿ ಇದೆ.
ಚಿಕ್ಕಮಗಳೂರು- ಶೇ.86.29, ಕಡೂರು- ಶೇ. 89.64, ತರೀಕೆರೆ- ಶೇ. 97.28, ಮೂಡಿಗೆರೆ- ಶೇ. 83.75, ಕೊಪ್ಪ- ಶೇ. 96.75, ಎನ್.ಆರ್.ಪುರ- ಶೇ. 91.48, ಶೃಂಗೇರಿ- ಶೇ. 89.43 ರಷ್ಟು ಪ್ರಗತಿ ಸಾಧಿಸಲಾಗಿದೆ.